ರಾಷ್ಟ್ರಗೀತೆ ಅರ್ಥವನ್ನು ಮಕ್ಕಳಿಗೆ ತಿಳಿಸಿ

7

ರಾಷ್ಟ್ರಗೀತೆ ಅರ್ಥವನ್ನು ಮಕ್ಕಳಿಗೆ ತಿಳಿಸಿ

Published:
Updated:

ಕೆಂಭಾವಿ: ಪಟ್ಟಣದ ವಿವಿಧೆಡೆ ಗಣರಾಜ್ಯೋತ್ಸವವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ಕೆಂಭಾವಿ ಪಟ್ಟಣದಲ್ಲಿ ಶುಕ್ರವಾರ ಭಗತ್ ಸಿಂಗ್ ಗೆಳೆಯರ ಬಳಗದ ವತಿಯಿಂದ 300 ಅಡಿ ಉದ್ದದ ಬೃಹತ್ ತಿರಂಗಯಾತ್ರೆ ಹಾಗೂ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಉಪನ್ಯಾಸಕ ಲಕ್ಷ್ಮೀಕಾಂತ ದೇವರಗೋನಾಲ, ರಾಷ್ಟ್ರಭಕ್ತಿಯನ್ನು ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಕಲಿಸಬೇಕು. ರಾಷ್ಟ್ರಗೀತೆಯ ಅರ್ಥವನ್ನು ತಿಳಿಸಿದಾಗ ಮಾತ್ರ ಜಾತ್ಯತೀತತೆಯ ಅರ್ಥ ಅವರಿಗೆ ತಿಳಿಯುತ್ತದೆ ಎಂದು ಹೇಳಿದರು.

‘ಅಂಬೇಡ್ಕರ್ ಅವರು ದೂರದೃಷ್ಟಿಯುಳ್ಳ ಒಬ್ಬ ಮೇಧಾವಿ ನಾಯಕರಾಗಿದ್ದರು. ಇನ್ನೂರು ವರ್ಷದ ನಂತರ ಭಾರತ ಹೇಗಿರಬೇಕು ಎಂಬ ಕಲ್ಪನೆ ಅವರಲ್ಲಿತ್ತು’ ಎಂದರು.

ಇದೇ ಸಂದರ್ಭದಲ್ಲಿ ಭಗತ್‌ಸಿಂಗ್ ಗೆಳೆಯರ ಬಳಗದ ವತಿಯಿಂದ ಸೈನಿಕರ ಪಾಲಕರನ್ನು ಸನ್ಮಾನಿಸಲಾಯಿತು. ಸಂಗಮೇಶ ಇಜೇರಿ, ಗಿರಿರಾಜ ಶಹಾಪುರ, ರೇವಣಸಿದ್ದಯ್ಯ ಮಠ, ಮಂಜು ತುಂಬಗಿ, ಶ್ರೀಕಾಂತ ಅಂಗಡಿ, ರಮೇಶ ಕಾಚಾಪುರ, ಸೋಮನಾಥ, ಶ್ರೀಶೈಲ್ ಕಾಚಾಪುರ ಸೇರಿದಂತೆ ಇತರರಿದ್ದರು.

ಪುರಸಭೆ ಕಾರ್ಯಾಲಯದಲ್ಲಿ ಅಧ್ಯಕ್ಷ ದೇವಪ್ಪ ಮ್ಯಾಗೇರಿ ಧ್ವಜಾರೋಹಣ ನೆರೆವೇರಿಸಿದರು. ಮುಖ್ಯಾಧಿಕಾರಿ ಚಂದ್ರಶೇಖರ ಮೇಟಿ ಇದ್ದರು. ಪುರಸಭೆ ಆವರಣದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಸ್ಪಂದನ ಪಬ್ಲಿಕ್ ಶಾಲೆಯಲ್ಲಿ ನಿವೃತ್ತ ಶಿಕ್ಷಕ ಬಸವಂತ್ರಾಯ ಪಾಟೀಲ ಧ್ವಜಾರೋಹಣ ನೆರೆವೇರಿಸಿದರು. ಪುರಸಭೆ ಸದಸ್ಯ ಶಂಕ್ರೆಪ್ಪ ದೇವೂರ, ರಮೇಶ ಕೊಡಗಾನೂರ, ಶಿಕ್ಷಕಿಯರಾದ ಸುಜಾತಾ, ಸುಮಲತಾ, ಫರೀದಾ, ನಾಗಮ್ಮ, ಕನ್ನಿಸ್, ನೀಲಮ್ಮ, ಸಿದ್ದು ಇದ್ದರು.

ವಿದ್ಯಾಲಕ್ಷ್ಮೀ ಪಬ್ಲಿಕ್ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಸ್.ರಾಮು ಧ್ವಜಾರೋಹಣ ನೆರೆವೇರಿಸಿದರು. ಶಿಕ್ಷಕಿ ಎಸ್.ನಾಗವೇಣಿ, ಶಿಕ್ಷಕ ಬಂದೇನವಾಜ ಪಟೇಲ ಮುದನೂರ ಸೇರಿದಂತೆ ಹಾಜರಿದ್ದರು. ಗ್ರಂಥಾಲಯದಲ್ಲಿ ಗ್ರಂಥಾಲಯ ನಿರ್ವಾಹಕ ಮುಲ್ಲಾ ಸಾಬ ಧ್ವಜಾರೋಹಣ ನೆರವೇರಿಸಿದರು.

ಜನತಾ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಪೂಜಾರಿ ಹಾಗೂ ಪುರಸಭೆ ಸದಸ್ಯ ದುರ್ಗಪ್ಪ ಮ್ಯಾಗೇರಿ, ಮುಖ್ಯಗುರು ಶ್ರೀಶೈಲ್ ಮುರಡಿ, ಸುಭಾಸ ಆಲೂರ, ದವಲಸಾಬ ಆಂದೇಲಿ, ಮೈತಾಬಿ, ಮಕ್ತುಂ ಪಟೇಲ ಹಾಗೂ ಶಿಕ್ಷಕಿ ಸಿದ್ದಮ್ಮ ಇದ್ದರು.

ಪಟ್ಟಣದ ವಾರ್ಡ್‌ ನಂ.2 ರಲ್ಲಿ ಭಾರತೀಯ ದಲಿತ ಪ್ಯಾಂಥರ್ಸ್ ಹೋಬಳಿ ಶಾಖೆ ವತಿಯಿಂದ ನಡೆದ ಗಣರಾಜ್ಯೋತ್ಸವದಲ್ಲಿ ಪುರಸಭೆ ಸದಸ್ಯ ಬಸವರಾಜ ಬಸರಿಗಿಡ ಧ್ವಜಾರೋಹಣ ನೇರಿವೆರಿಸಿದರು.

ಅಧ್ಯಕ್ಷ ಲಕ್ಷ್ಮಣ ಬಸರಿಗಿಡ ಮಾತನಾಡಿದರು. ಶಿವಶರಣಪ್ಪ ವಾಡಿ, ಅಯ್ಯಣ್ಣ ಮಾಳಳ್ಳಿಕರ್, ಸುಭಾಸ ಕಟ್ಟಿಮನಿ, ಹಣಮಂತ ಅಮರಖೇಡ, ಸೋಮು ಹಲಗಿ, ಮರೆಪ್ಪ ಇಂಗಳಗಿ, ಜುಮ್ಮಪ್ಪ ಕಟ್ಟಿಮನಿ, ಲಕ್ಷ್ಮಣ ಬಾವಿಮನಿ, ಯಲ್ಲಪ್ಪ ಭಾವಿಮನಿ, ಯಮನಪ್ಪ ಸುಳ್ಳೂರು, ಮಲ್ಲಿಕಾರ್ಜುನ ಬಸರಿಗಿಡ, ಶಂಕ್ರೆಪ್ಪ ದೊಡ್ಡಮನಿ, ಶಿವರಾಜ ಯಮನೂರ, ಶಂಕ್ರೆಪ್ಪ ದೊಡ್ಡಮನಿ, ಬಸವರಾಜ ಯಮನೂರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry