‘ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಚ್ಯುತಿ ಬೇಡ’

7

‘ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಚ್ಯುತಿ ಬೇಡ’

Published:
Updated:

ಮುನಿರಾಬಾದ್‌: ಸ್ವಾತಂತ್ರ್ಯ ಅನುಭವಿಸುವ ಜೊತೆಗೆ ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದು ಇಂಡಿಯಾ ರಿಸರ್ವ್‌ ಬೆಟಾಲಿಯನ್‌ (ಐಆರ್‌ಬಿ) ಕಮಾಂಡೆಂಟ್‌ ನಿಷಾಜೇಮ್ಸ್‌ ಅಭಿಪ್ರಾಯಪಟ್ಟರು. ಇಲ್ಲಿನ ಐಆರ್‌ಬಿ ಆವರಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸಂವಿಧಾನ ಎಲ್ಲಾ ಪ್ರಜೆಗಳಿಗೆ ಸ್ವತಂತ್ರವಾಗಿ ಜೀವಿಸುವ ಹಕ್ಕು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಆಚರಣೆ ಹಕ್ಕು, ಶೋಷಣೆಯ ವಿರುದ್ಧದ ಹಕ್ಕುಗಳನ್ನು ಎಲ್ಲಾ ಪ್ರಜೆಗಳಿಗೆ ಸಮಾನವಾಗಿ ನೀಡಲಾಗಿದೆ. ಹಕ್ಕುಗಳ ಜೊತೆ ಕೆಲವು ಕರ್ತವ್ಯ ಜವಾಬ್ದಾರಿಗಳನ್ನೂ ವಹಿಸಿದೆ.

ಕೆಲವು ಕಡೆ ಮಹಿಳೆಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಇನ್ನೂ ಆತಂಕ, ಭಯದ ವಾತಾವರಣ ಇದೆ. ಮಹಿಳೆ ಸ್ವಾವಲಂಬಿಯಾಗಿ ಜೀವಿಸಲು ಅನುವು ಮಾಡಿಕೊಡಿ ಎಂದರು. ಉಪಕಮಾಂಡೆಂಟ್‌ ಐ.ಜಿ.ಸುಬ್ಬಯ್ಯ, ಸಹಾಯಕ ಕಮ್ಯಾಂಡೆಂಟ್‌ ಈ.ಸತೀಶ್‌, ಖಾಜಾಹುಸೇನ್‌ ದೊಡ್ಮನಿ, ಮಲ್ಲೇಶಪ್ಪ ಇದ್ದರು.

ಪಿಟಿಎಸ್‌: ಇಲ್ಲಿನ ಮೀಸಲು ಪೊಲೀಸ್‌ ತರಬೇತಿ ಶಾಲೆ (ಪಿಟಿಎಸ್‌)ನಲ್ಲಿ ಪ್ರಾಚಾರ್ಯ ಡಾ.ರಾಮಕೃಷ್ಣ ಮುದ್ದೇಪಾಲ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಗ್ರಾಮಪಂಚಾಯಿತಿಯಲ್ಲಿ ಅಧ್ಯಕ್ಷೆ ಸುಶೀಲಮ್ಮ ಧ್ವಜಾರೋಹಣ ನೆರವೇರಿಸಿದರು. ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ.ಇಮಾಮಸಾಹೇಬ್‌ ಮಾತನಾಡಿದರು. ಉಪಾಧ್ಯಕ್ಷೆ ಖುರ್ಷಿದಾಬೇಗಂ ಬಾಬನ್ನಿ, ಭರಮಪ್ಪ ಬೆಲ್ಲದ ಇದ್ದರು.

ಪಿ.ಲಿಂಗಯ್ಯ ಸ್ಮಾರಕ ಶಾಲೆಯಲ್ಲಿ ಅಧ್ಯಕ್ಷ ಪಿ.ಸಾಂಬಶಿವರಾವ್‌ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ವಿಜಯನಗರ ಸಂಯುಕ್ತ ಪಿಯು ಕಾಲೇಜಿನಲ್ಲಿ ಪ್ರಾಚಾರ್ಯ ಬಸವರಾಜ ಧ್ವಜಾರೋಹಣ ನೆರವೇರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry