ಅಮೀನಗಡ ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

7

ಅಮೀನಗಡ ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

Published:
Updated:

ಅಮೀನಗಡ: ‘ಸಂವಿಧಾನವು ಪರಮೋಚ್ಚ ಕಾನೂನಾಗಿದ್ದು ಅದನ್ನು ಗೌರವಿಸುವುದು ಮತ್ತು ಪಾಲಿಸುವುದು ದೇಶದ ಪ್ರತಿ ಪ್ರಜೆಯ ಕರ್ತವ್ಯವಾಗಿದೆ’ ಎಂದು ಶಿಕ್ಷಕ ಎಸ್.ಎಸ್.ಲಾಯದಗುಂದಿ ಹೇಳಿದರು. ಸಮೀಪದ ಹೊನ್ನರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

‘ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆಗಾಗಿ ಸಂವಿಧಾನವು ಸ್ವಾಭಾವಿಕ ಹಕ್ಕುಗಳನ್ನು ಕಲ್ಪಿಸಿದ್ದು, ಇಂದು ದೇಶದಲ್ಲಿ ಅವುಗಳನ್ನು ಪಡೆಯಲು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ’ ಎಂದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ರವೀಂದ್ರ ಮುಳ್ಳೂರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಶೈಕ್ಷಣಿಕ ವರ್ಷದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮುಖ್ಯಶಿಕ್ಷಕ ಕೆ.ಬಿ.ವಾಸನಗೇರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ವೀರಪ್ಪ ಮಾಗಿ, ಕೂಡ್ಲಯ್ಯ ಹಿರೇಮಠ, ರಾಮನಗೌಡ ಮಾಗಿ, ಯಲ್ಲಪ್ಪ ಅಂಬ್ಲಿಕೊಪ್ಪ, ಮಹಾಂತೇಶ ಚಲವಾದಿ, ಬಸನಗೌಡ ಕೊಣ್ಣೂರ, ಗದಗಯ್ಯ ಹಿರೇಮಠ, ಶಿಕ್ಷಕ ಸಿಬ್ಬಂದಿ ಹಾಜರಿದ್ದರು.

ಕರವೇಯಿಂದ ಧ್ವಜಾರೋಹಣ: ಕರ್ನಾಟಕ ರಕ್ಷಣಾ ವೇದಿಕೆ ಅಮೀನಗಡ ಘಟಕದ ವತಿಯಿಂದ 69ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಾಜಿ ಯೋಧ ಮಹಾಂತಯ್ಯ ರೇವಣಕಿಮಠ ಧ್ವಜಾರೋಹಣ ಮಾಡಿದರು. ಸಿದ್ದು ಸಜ್ಜನ. ಪುಂಡಲಿಕಪ್ಪ ಮೂಲಿಮನಿ, ರಾಜು ಮಿರಜಕರ, ಗದ್ದೆಪ್ಪ ಕೊರವರ, ಸುರೇಶ ನಾಯಕ, ಬಸವರಾಜ ಸಜ್ಜನ, ವಿಜಯಕುಮಾರ ಕನ್ನೂರ, ವಿದ್ಯಾಧರ ಮುದಗಲ್, ಮಲ್ಲಿಕಾರ್ಜುನ ಸೂಡಿ, ಉಪಸ್ಥಿತರಿದ್ದರು. ಕರವೇ ಅಧ್ಯಕ್ಷಸಂಗಮೇಶ ಬೇವೂರ ಕಾರ್ಯಕ್ರಮ ನಿರೂಪಿಸಿದರು.

ಕಮತಗಿ ವರದಿ: ಪಟ್ಟಣದಲ್ಲಿ 69ನೇ ಗಣರಾಜ್ಯೋತ್ಸವ ಸಂಭ್ರಮದಿಂದ ನಡೆಯಿತು. ಹುಚ್ಚೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಸಂಘದ ಅಧ್ಯಕ್ಷರಾದ ಹುಚ್ಚೇಶ್ವರ ಸ್ವಾಮೀಜಿ ಧ್ವಜಾರೋಹಣ ಮಾಡಿದರು. ಶಿವಶರಣಿ ಕಲ್ಯಾಣಮ್ಮ ಮಾಧ್ಯಮಿಕ ಶಾಲೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಹಾಂತೇಶ ಅಂಗಡಿ ಧ್ವಜಾರೋಹಣ ಮಾಡಿದರು.

ಬೋಡನಾಯಕದಿನ್ನಿ: ಸಮೀಪದ ಬೋಡನಾಯಕದಿನ್ನಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ರೇವಣಸಿದ್ದಯ್ಯ ಹಿರೇಮಠ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಶಿಕ್ಷಕ ಎಸ್,ಎಸ್.ಕಾಶೀಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹದೇವಪ್ಪ ಕೋಳಾರ ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry