ಅಕ್ರಮ ಮರಳು ದಂಧೆ: 5 ಟ್ರ್ಯಾಕ್ಟರ್‌ ವಶ

7

ಅಕ್ರಮ ಮರಳು ದಂಧೆ: 5 ಟ್ರ್ಯಾಕ್ಟರ್‌ ವಶ

Published:
Updated:

ಹೊಸದುರ್ಗ: ತಾಲ್ಲೂಕಿನ ವೇದಾವತಿ ನದಿ ಪಾತ್ರದ ಜೋಗಮ್ಮನಹಳ್ಳಿ ಸಮೀಪ ಶುಕ್ರವಾರ ಅಕ್ರಮ ಮರಳುಗಾರಿಕೆ ಮಾಡುತ್ತಿದ್ದ 5 ಟ್ರ್ಯಾಕ್ಟರ್‌ಗಳನ್ನು ಸಾರ್ವ ಜನಿಕರು ಹಿಡಿದು ತಾಲ್ಲೂಕು ಆಡಳಿತಕ್ಕೆ ಒಪ್ಪಿಸಿದ್ದಾರೆ.

ನಾಗರಿಕರ ಹಿತ ಕಾಪಾಡಲು ಮರಳು ದಂಧೆ ತಡೆಯಿರಿ ಎಂದು ಹಲವು ಬಾರಿ ತಾಲ್ಲೂಕು ಆಡಳಿತ ಹಾಗೂ ಪೊಲೀಸ್‌ ಇಲಾಖೆಗೆ ತಿಳಿಸಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ದೂರು.

ಅಕ್ರಮ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಪೊಲೀಸ್‌ ಹಾಗೂ ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡಲಾಯಿತು. ಇಲಾಖೆಯ ಸಿಬ್ಬಂದಿ ಜತೆಗೆ   ಸ್ಥಳಕ್ಕೆ ಹೋಗಿ ಅಲ್ಲಿದ್ದ ಟ್ರ್ಯಾಕ್ಟರ್‌ಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಹೊಸದುರ್ಗದ ಸಮಾಜ ಸೇವಕ ಎ.ಆರ್‌.ಶಮಂತ್‌, ಮಾಹಿತಿ ಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಮೋಹನ್‌ ಗುಜ್ಜಾರ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry