‘ಸಂವಿಧಾನದ ಆಶಯಕ್ಕೆ ತಕ್ಕಂತೆ ನಡೆಯಿರಿ’

7

‘ಸಂವಿಧಾನದ ಆಶಯಕ್ಕೆ ತಕ್ಕಂತೆ ನಡೆಯಿರಿ’

Published:
Updated:
‘ಸಂವಿಧಾನದ ಆಶಯಕ್ಕೆ ತಕ್ಕಂತೆ ನಡೆಯಿರಿ’

ನರಗುಂದ: ‘ಭಾರತ ಸಂವಿಧಾನವು ವಿಶ್ವಕ್ಕೆ ಮಾದರಿಯಾಗಿದೆ. ಪ್ರತಿಯೊಬ್ಬ ಭಾರತೀಯ ಪ್ರಜೆ ಸಂವಿಧಾನದ ಆಶಯಗಳಿಗೆ ತಕ್ಕಂತೆ ನಡೆಯಬೇಕು’ ಎಂದು ಶಾಸಕ ಬಿ.ಆರ್‌.ಯಾವಗಲ್‌ ಹೇಳಿದರು.

ಪಟ್ಟಣದಲ್ಲಿ ಶನಿವಾರ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ‘ನರಗುಂದದಲ್ಲಿ ಪಶುವೈದ್ಯಕೀಯ ಡಿಪ್ಲೋಮಾ ಕಾಲೇಜು ಆರಂಭಿಸಲಾಗುವುದು. ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು’ ಎಂದರು.

ಪಟ್ಟಣದ ಪುರಸಭೆಯಲ್ಲಿ ತಹಸೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಧ್ವಜಾರೋಹಣ ನೆರವೇರಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಜಿಲ್ಲಾ ಪಂಚಾಯ್ತಿ ಸದಸ್ಯೆ ರೇಣುಕಾ ಅವರಾದಿ, ಸದಸ್ಯ ವಿಠ್ಠಲ ತಿಮ್ಮರಡ್ಡಿ, ಪ್ರಭು ಯಲಿಗಾರ, ಪುರಸಭೆ ಸದಸ್ಯ ಸುರೇಶ ಸವದತ್ತಿ, ಮಹೇಶ ಬಡಿಗೇರ, ರಾಜು ಕಲಾಲ, ಪುಂಡಲೀಕಪ್ಪ ಹುಲಜೋಗ, ಇಒ ಎ.ಜಿ.ಪಾಟೀಲ, ಡಿವೈಎಸ್‌ಪಿ ಗುರು ಮತ್ತೂರು ಇದ್ದರು.

ಲಯನ್ಸ್ ಶಾಲೆ: ನರಗುಂದದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ‘ಪ್ರತಿಯೊಬ್ಬರು ಸಂವಿಧಾನದ ಬಗ್ಗೆ ಅರಿಯಬೇಕಿದೆ. ಕರ್ತವ್ಯ ಪ್ರಜ್ಞೆ, ದೇಶಾಭಿಮಾನ ಬೆಳೆಸಿಕೊಳ್ಳಬೇಕು’ ಎಂದು ಮಾಜಿ ಸಚಿವ ಸಿ.ಸಿ.ಪಾಟೀಲ ಹೇಳಿದರು. ಕ್ಲಬ್ ಅಧ್ಯಕ್ಷ ವಿ.ಆರ್.ಗಡಾದ ಧ್ವಜಾರೋಹಣ ನೆರವೇರಿಸಿದರು.

ನಿರ್ದೇಶಕ ಜಿ.ಬಿ.ಕುಲಕರ್ಣ, ಸಿ.ಎಸ್.ಸಾಲೂಟಗಿಮಠ, ಎಸ್.ಎಸ್.ಪಾಟೀಲ, ಜೆ.ವಿ.ಕಂಠಿ, ಟಿ.ಎಸ್.ರೊಖಡೆ, ಮುಖ್ಯಶಿಕ್ಷಕ ಜಿಬಿ ಜಾರ್ಜ್, ಎನ್.ವೈ.ಭಾವಿ ಇದ್ದರು. ಸಂಜನಾ ಮಡಿವಾಳರ ಸ್ವಾಗತಿಸಿದರು. ಗಂಗಮ್ಮ ಪಾಟೀಲ ನಿರೂಪಿಸಿದರು. ಅನನ್ಯ ಖೋದಾನಪೂರ ವಂದಿಸಿದರು.

‘ಸಂವಿಧಾನ ಗೌರವಿಸಿ’

ಡಂಬಳ: ‘ದೇಶದ ಸಂವಿಧಾನವನ್ನು ಗೌರವಿಸಬೇಕು. ಹಕ್ಕುಗಳನ್ನು ಪಡೆದುಕೊಳ್ಳುವುದರೊಂದಿಗೆ ಕರ್ತವ್ಯಗಳನ್ನು ನಿರ್ವಹಿಸಬೇಕು’ ಎಂದು ಉಪ ತಹಶೀಲ್ದಾರ್ ಎಂ.ಎ.ನದಾಫ ಹೇಳಿದರು.

ಗ್ರಾಮ ಪಂಚಾಯ್ತಿ ತೋಂಟದಾರ್ಯ ಕಲಾ ಭವನದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ಗಂಗಾವತಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ರೇವಣಸಿದ್ದಪ್ಪ ಕರಿಗಾರ ಇದ್ದರು.

ಶ್ರೀರಾಮಸೇನಾ: ಡಂಬಳ ಗ್ರಾಮದ ವೆಂಕಟಾದ್ರಿ ಬಹದ್ದೂರ ದೇಸಾಯಿ ವೃತ್ತದಲ್ಲಿ ಶ್ರೀರಾಮಸೇನಾ, ಕೆಸರಿಪಡೆಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ಮುತ್ತು ಹೂಗಾರ ಧ್ವಜಾರೋಹಣ ನೇರವರಿಸಿದರು.

ಮುಖಂಡ ರುದ್ರಪ್ಪ ಏಣಗಿ, ಮಂಜು ಪೂಜಾರ, ಮಾರುತಿ ಗದಗಿನ, ಅಪ್ಪಯ್ಯ ಹಿರೇಮಠ, ಶಿವರಾಜ ವಡ್ಡರ, ಬಸವರಾಜ ಯಲಭೋವಿ, ಅಶೋಕ ಹಡಪದ, ಬಸಪ್ಪ ಸೂರಟೂರ, ಶಂಕರ ಬಡಿಗೇರ, ಗವಿಸಿದ್ದಪ್ಪ ಪಾರಪ್ಪನವರ, ಮಲ್ಲಪ್ಪ ಹಳ್ಳಕಾರ, ಕಳಸಪ್ಪ ಗೊರವರ, ಸುಭಾಸ ಕಿತ್ನೂರ, ಅರ್ಜುನಪ್ಪ ಜಂತ್ಲಿ ಇದ್ದರು.

ಮಲ್ಲಾಪೂರದಲ್ಲಿ ಸಡಗರ

ಬೆಳವಣಿಕಿ (ರೋಣ ತಾ.): ಸಮೀಪದ ಮಲ್ಲಾಪೂರದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಎನ್.ನರಸಿಂಹಮೂರ್ತಿ ಧ್ವಜಾರೋಹಣ ನೆರವೇರಿಸಿದರು. ಎಸ್.ಬಿ.ಗಾಯಕವಾಡ, ಆರ್.ವೈ.ಭಜಂತ್ರಿ, ಎಂ.ಆರ್.ಚನ್ನಪ್ಪಗೌಡ್ರ, ಆರ್.ಎಚ್,ಕರಿಬಾವಿ, ರುದ್ರಪ್ಪ ಶಿವಶಿಂಪಿ, ಎಸ್.ಎ.ಗಾಜಿ, ಕಾಶೀಂ ಸಾಹೇಬ ಮುಲ್ಲಾ ಇದ್ದರು. ಮಕ್ಕಳಿಗೆ ನೋಟ್‌ಬುಕ್ ವಿತರಿಸಲಾಯಿತು.

ಬೆಳವಣಿಕಿಯ ಉಪವಿಭಾಗ ಕಚೇರಿಯಲ್ಲಿ ಗಣರಾಜ್ಯೋತ್ಸವ ಕಾರ್ಕ್ರಮ ನಡೆಯಿತು. ಆರ್.ಆರ್.ರಜಪೂತ ಧ್ವಜಾರೋಹಣ ನೆರವೇರಿಸಿದರು. ಎಸ್.ಎಲ್.ಮಾಲಿಪಾಟೀಲ, ಎಂ.ಎ.ಕುದ್ದುಸ್, ಬಾಡಿನ, ಬಸಪ್ಪ ತಳವಾರ, ಹನಮಂತ ನಂದಿ ಇದ್ದರು. ಇಲ್ಲಿನ ಕಂದಾಯ ಇಲಾಖೆಯಲ್ಲಿ ನಡೆದ ಗಣರಾಜ್ಯೋತ್ಸವದ ಅಂಗವಾಗಿ ಈರನಗೌಡ ಪಾಟೀಲ ಧ್ಚಜಾರೋಹಣ ನೆರವೇರಿಸಿದರು. ಗ್ರಾಮ ಲೆಕ್ಕಾಧಿಕಾರಿ ಎಸ್.ಪಿ.ರಾಮಣ್ನವರು, ಮಲ್ಲಪ್ಪ ಹಕ್ಕಾಪಕ್ಕಿ, ಈಶಪ್ಪ ಕುಲಕರ್ಣೀ, ಗುರಪ್ಪ ಆದವಾನಿ, ಹನಮಂತ ಆದವಾನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry