ಜೈನ ಮಠಕ್ಕೆ 32 ಕ್ವಿಂಟಲ್ ಆಹಾರ ಧಾನ್ಯ

7

ಜೈನ ಮಠಕ್ಕೆ 32 ಕ್ವಿಂಟಲ್ ಆಹಾರ ಧಾನ್ಯ

Published:
Updated:

ಶ್ರವಣಬೆಳಗೊಳ : ಶ್ರದ್ಧಾ, ಭಕ್ತಿಯಿಂದ ದಾನ ಮಾಡಿರುವ ದವಸ ಧಾನ್ಯಗಳನ್ನು ಮಹಾ ಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳಲು ವಿವಿಧ ಕಡೆಗಳಿಂದ ಆಗಮಿಸಿರುವ ತ್ಯಾಗಿಗಳ ಆಹಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಪಟ್ಟಣದ ವಿಂಧ್ಯಗಿರಿಯ ಬಾಹುಬಲಿ ಬೆಟ್ಟದ ಮುಂಭಾಗದಲ್ಲಿ ಶಿವಮೊಗ್ಗ ನಗರದಿಂದ ಬಂದ ದವಸ ಧಾನ್ಯದ ಲಾರಿಯನ್ನು ಸ್ವಾಗತಿಸಿ ಮಾತನಾಡಿದ ಅವರು, ಈ ಬಾರಿ ಭಕ್ತರು ಮುಕ್ತ ಮನಸ್ಸಿನಿಂದ ಕೊಡುಗೆ ನೀಡಿ ಮಹೋತ್ಸವದ ಯಶಸ್ಸಿಗೆ ಕೈಜೋಡಿಸುತ್ತಿರುವುದು ಸಂತಸ ತಂದಿದೆ ಎಂದರು.

ಶಿವಮೊಗ್ಗ ಜಿಲ್ಲೆ ಹುಂಚ ಜೈನ ಮಠದ ಪೀಠಾಧಿಪತಿ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಪಾವನ ಸಾನಿಧ್ಯ ವಹಿಸಿದ್ದರು.

ಅಕ್ಕಿ 10 ಕ್ವಿಂಟಲ್‌, ರವೆ 5 ಕ್ವಿಂಟಲ್‌, ತುಪ್ಪ 300 ಕೆ.ಜಿ., ಹೆಸರು ಬೇಳೆ 270 ಕೆ.ಜಿ, ತೊಗರಿ ಬೇಳೆ 300 ಕೆ.ಜಿ., ಗೋಧಿ 360 ಕೆ.ಜಿ, ರಾಗಿ 200 ಕೆ.ಜಿ, ಗೋಡಂಬಿ 100 ಕೆ.ಜಿ., ಜೋಳ 60 ಕೆ.ಜಿ, ಬೆಲ್ಲ 60 ಕೆ.ಜಿ, ಸಕ್ಕರೆ 50 ಕೆ.ಜಿ ದಾನವಾಗಿ ನೀಡಿದ್ದಾರೆ.

ಶಿವಮೊಗ್ಗ ಜೈನ ಸಮಾಜದ ಪದಾಧಿಕಾರಿಗಳಾದ ಯಶೋಧರ ಹೆಗಡೆ, ಬಿ.ಎನ್‌.ಕುಬೇರಪ್ಪ, ಮಾಲತಿ ಕುಬೇರಪ್ಪ, ಪಾರ್ಶ್ವನಾಥ್‌, ಲತಾ ರವಿ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry