‘ದೇಶಕ್ಕೆ ಪೂರಕವಾದ ಸಂವಿಧಾನ ನಮ್ಮದು’

7

‘ದೇಶಕ್ಕೆ ಪೂರಕವಾದ ಸಂವಿಧಾನ ನಮ್ಮದು’

Published:
Updated:

ಹಾನಗಲ್: ‘ವಿವಿಧತೆಯಲ್ಲಿ ಏಕತೆ ಸಾಧಿಸಿರುವ ದೇಶಕ್ಕೆ ಪೂರಕವಾದ ಸಂವಿಧಾನ ನಮ್ಮದು. ನಮ್ಮ ಸಂವಿಧಾನದ ಬಗ್ಗೆ ಗೌರವ, ಹೆಮ್ಮೆ ಬೇಕು. ಸಂವಿಧಾನದ ಕುರಿತು ಇಲ್ಲಸಲ್ಲದ ಹೇಳಿಕೆ ನೀಡುವವವರಿಗೆ ಸೂಕ್ತ ಶಿಕ್ಷೆ ನಿಡಬೇಕು’ ಎಂದು ಶಾಸಕ ಮನೋಹರ ತಹಸೀಲ್ದಾರ್‌ ಹೇಳಿದರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ನಿಮಿತ್ತ ಶುಕ್ರವಾರ ನಡೆದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ‘ಸಂವಿಧಾನದ ಆಶಯಗಳನ್ನು ಈಡೇರಿಸುವ ಬದ್ಧತೆ ಪ್ರದರ್ಶಿಸುವ ಮೂಲಕ ದೇಶದ ಐಕ್ಯತೆ, ಸಮಗ್ರತೆಗೆ ಪ್ರತಿಯೊಬ್ಬರೂ ಮುಂದಾಗಬೇಕು’ ಎಂದರು. ತಹಶೀಲ್ದಾರ್‌ ಶಕುಂತಲಾ ಚೌಗಲಾ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ಹಸಿನಾಭಿ ನಾಯ್ಕನವರ, ಉಪಾಧ್ಯಕ್ಷ ಗಣೇಶ ಮೂಡ್ಲಿಯವರ, ಸದಸ್ಯ ಕಲ್ಯಾಣಕುಮಾರ ಶೆಟ್ಟರ, ಸಂತೋಷ ಸುಣಗಾರ, ಮಖಬೂಲ್‌ ಅಹ್ಮದ್‌ ಸರ್ವಿಕೇರಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ನಂತರ ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗೆ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪಟ್ಟಣದ ವಿವಿಧೆಡೆ ಧ್ವಜಾರೋಹಣ: ಇಲ್ಲಿನ ದಾನೇಶ್ವರಿ ಸಹಕಾರ ಸಂಘದಲ್ಲಿ ಶುಕ್ರವಾರ ಗಣರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ನಾಗಪ್ಪ ಸವದತ್ತಿ ನೆರವೇರಿಸಿದರು. ಉಪಾಧ್ಯಕ್ಷ ಪಿ.ಆರ್‌.ಸಿಂಧೂರ, ಸದಸ್ಯರಾದ ಏಳುಕೋಟೆಪ್ಪ ಹಾವಳೇರ, ಪ್ರಭಾಕರ ಹೆಗಡೆ, ವಿಜಯಕುಮಾರ ಕುಬಸದ, ಪಿ.ವೈ.ಬಾರ್ಕಿ, ಮಂಜು ಗೊಂದಿ ಇದ್ದರು.

ಕಾಂಗ್ರೆಸ್‌ ಕಚೇರಿ: ಶಾಸಕ ಮನೋಹರ ತಹಸೀಲ್ದಾರ್ ಧ್ವಜಾರೋಹಣ ನೆರವೇರಿಸಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಮತ್ತು ಮುಖಂಡರು ಇದ್ದರು.

ಬಿಜೆಪಿ ಕಚೇರಿ: ಧ್ವಜಾರೋಹಣದಲ್ಲಿ ಮುಖಂಡರಾದ ಎ.ಎಸ್‌.ಬಳ್ಳಾರಿ, ಬಿ.ಎಸ್‌.ಅಕ್ಕಿವಳ್ಳಿ, ಕಲ್ಯಾಣಕುಮಾರ ಶೆಟ್ಟರ, ಸಂತೋಷ ಟಿಕೋಜಿ ಇದ್ದರು. ತಾಲ್ಲೂಕು ಪಂಚಾಯ್ತಿಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ ಧ್ವಜಾರೋಹಣ ನೆರವೇರಿಸಿದರು. ಕಾರ್ಯನಿರ್ವಾಹಕ ಅಧಿಕಾರಿ, ಡಾ.ಶ್ರೀಧರ ಇದ್ದರು.

ಪುರಸಭೆ: ಪುರಸಭೆಯಲ್ಲಿ ಅಧ್ಯಕ್ಷೆ ಹಸಿನಾಭಿ ನಾಯ್ಕನವರ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಗಣೇಶ ಮೂಡ್ಲಿಯವರ, ಮುಖ್ಯಾಧಿಕಾರಿ ಎಚ್‌.ಎನ್‌.ಬಜಕ್ಕನವರ ಇದ್ದರು.

ಎಪಿಎಂಸಿ: ಎಪಿಎಂಸಿಯಲ್ಲಿ ಅಧ್ಯಕ್ಷ ಶಿವಯೋಗಿ ವಡೆಯರ ಧ್ವಜಾರೋಹಣ ನೆರವೇರಿಸಿದರು. ಅಧಿಕಾರಿ ಜಾವೇದ್‌ ಇದ್ದರು. ಎನ್‌ಸಿಜೆ ಕಾಲೇಜು, ಕುಮಾರೇಶ್ವರ ಕಲಾ, ವಾಣಿಜ್ಯ ಕಾಲೇಜಿನಲ್ಲಿ ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಎಸ್‌.ಬಳ್ಳಾರಿ ಧ್ವಜಾರೋಹಣ ನೆರವೇರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry