ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ ಹರಾಜು: ಯಾರು ಯಾವ ತಂಡಕ್ಕೆ? ಹರಾಜಾಗದ ಆಟಗಾರರು ಯಾರು?

Last Updated 27 ಜನವರಿ 2018, 11:50 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ 11ನೇ ಆವೃತ್ತಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ನಗರದಲ್ಲಿ ಆರಂಭವಾಗಿದೆ.

ಪ್ರಕಿಯೆ ಎರಡು ದಿನಗಳ ಕಾಲ ನಡೆಯಲಿದ್ದು, ಮೊದಲ ದಿನವೇ ಪ್ರಮುಖ ಆಟಗಾರರು ವಿವಿಧ ತಂಡಗಳಿಗೆ ಮಾರಾಟವಾಗಿದ್ದಾರೆ.

ಕಳೆದ ಆವೃತ್ತಿಗಳಲ್ಲಿ ಹಲವು ಪಂದ್ಯಗಳಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಪ್ರತಿಭಾವಂತ ಆಟಗಾರರು, ಪಂದ್ಯದ ತಿರುವು ಬದಲಿಸಬಲ್ಲ ಅನುಭವಿ ಆಟಗಾರರು ಸೇರಿದಂತೆ ಇದೇ ಮೊದಲ ಬಾರಿಗೆ ಐಪಿಎಲ್‌ ಬಿಡ್ಡಿಂಗ್‌ನಲ್ಲಿ ಕಾಣಿಸಿಕೊಂಡಿರುವ ಒಟ್ಟು 578 ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದೆ.

2013ರಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಎರಡು ವರ್ಷ ಅಮಾನತು ಶಿಕ್ಷೆ ಅನುಭವಿಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ಥಾನ ರಾಯಲ್ಸ್‌ ತಂಡಗಳು ಮರಳಿರುವುದು ಈ ಬಾರಿ ಪಂದ್ಯಾವಳಿಯ ಪ್ರಮುಖ ಆಕರ್ಷಣೆಯಾಗಿದ್ದು, ಹೋದ ವರ್ಷ ಇದ್ದ ಗುಜರಾತ್ ಲಯನ್ಸ್‌ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್‌ ತಂಡಗಳು ಈ ಬಾರಿ ನಿರ್ಗಮಿಸಿವೆ.

ಶನಿವಾರ ಟೀ ವಿರಾಮಕ್ಕೂ ಮುನ್ನ ವಿವಿಧ ತಂಡಗಳ ಪಾಲಾದ ಆಟಗಾರರ ವಿವರ ಈ ಕೆಳಗಿನಂತಿದೆ.

ಸನ್‌ ರೈಸರ್ಸ್‌ ಹೈದರಾಬಾದ್‌

ಮನೀಷ್‌ ಪಾಂಡೆ –  ₹ 11 ಕೋಟಿ

ರಶೀದ್‌ ಖಾನ್‌ –  ₹ 9 ಕೋಟಿ

ಶಿಖರ್‌ ಧವನ್‌ – ₹ 5.2 ಕೋಟಿ

ವೃದ್ಧಿಮಾನ್‌ ಶಹಾ – ₹ 5 ಕೋಟಿ

ಕೇನ್‌ ವಿಲಿಯಮ್ಸ್‌ – ₹ 3 ಕೋಟಿ

ಶಕೀಬ್‌ ಅಲ್‌ ಹಸನ್‌ – ₹ 2 ಕೋಟಿ

ಕಾರ್ಲೋಸ್ ಬ್ರಾಥ್‌ವೈಟ್ – ₹ 2 ಕೋಟಿ

ಯೂಸುಫ್‌ ಪಠಾಣ್‌ – ₹ 1.9 ಕೋಟಿ

ರಿಕಿ ಭುಯಿ – ₹ 20 ಲಕ್ಷ

ಕಿಂಗ್ಸ್‌ ಇಲೆವೆನ್‌ ಪಂಜಾಬ್‌

ಕೆ.ಎಲ್‌ ರಾಹುಲ್‌ – ₹ 11 ಕೋಟಿ

ಆರ್‌.ಅಶ್ವಿನ್‌ ಕಿಂಗ್ಸ್‌ – ₹ 7.6 ಕೋಟಿ

ಆ್ಯರೋನ್‌ ಫಿಂಚ್‌ – ₹ 6.2 ಕೋಟಿ

ಮಾರ್ಕಸ್‌ ಸ್ಟೋಯಿನ್ಸ್‌ – ₹ 6.2 ಕೋಟಿ

ಕರುಣ್‌ ನಾಯರ್‌ – ₹ 5.6 ಕೋಟಿ

ಡೇವಿಡ್‌ ಮಿಲ್ಲರ್‌ – ₹ 3 ಕೋಟಿ

ಯುವರಾಜ್‌ ಸಿಂಗ್‌ – ₹ 2 ಕೋಟಿ

ಮಯಾಂಕ್‌ ಅಗರ್‌ವಾಲ್‌ – ₹ 1 ಕೋಟಿ

ಮುಂಬೈ ಇಂಡಿಯನ್ಸ್‌

ಕೀರನ್‌ ಪೊಲಾರ್ಡ್‌ – ₹ 5.4 ಕೋಟಿ

ಪ್ಯಾಟ್‌ ಕಮಿನ್ಸ್‌ – ₹ 5.4 ಕೋಟಿ

ಸೂರ್ಯಕುಮಾರ್‌ ಯಾದವ್‌ – ₹ 3.2 ಕೋಟಿ

ಮುಫ್ತಾಫಿಜುರ್‌ ರಹ್ಮಾನ್‌ – ₹ 2.2 ಕೋಟಿ

ರಾಜಸ್ಥಾನ ರಾಯಲ್ಸ್‌

ಬೆನ್‌ ಸ್ಟೋಕ್ಸ್‌ – ₹ 12.5 ಕೋಟಿ

ಸಂಜು ಸ್ಯಾಮ್ಸನ್‌ – ₹ 8 ಕೋಟಿ

ಜೋಸ್‌ ಬಟ್ಲರ್‌ – ₹ 4.4 ಕೋಟಿ

ಅಜಿಂಕ್ಯಾ ರಹಾನೆ – ₹ 4ಕೋಟಿ

ರಾಹುಲ್‌ ತ್ರಿಪಾಠಿ – ₹ 3.4 ಕೋಟಿ

ಸ್ಟುವರ್ಟ್‌ ಬಿನ್ನಿ – ₹ 50 ಲಕ್ಷ

ಚೆನ್ನೈ ಸೂಪರ್‌ ಕಿಂಗ್ಸ್‌

ಕೇದಾರ್‌ ಜಾಧವ್‌ – ₹ 7.8 ಕೋಟಿ

ಡ್ವೇನ್‌ ಬ್ರಾವೋ – ₹ 6.4 ಕೋಟಿ

ಕರಣ್‌ ಶರ್ಮಾ – ₹ 5 ಕೋಟಿ

ಶೇನ್‌ ವಾಟ್ಸನ್‌ – ₹ 4 ಕೋಟಿ

ಅಂಬಾಟಿ ರಾಯುಡು – ₹ 2.2 ಕೋಟಿ

ಹರ್ಭಜನ್‌ ಸಿಂಗ್‌ – ₹ 2 ಕೋಟಿ

ಫಾಫ್‌ ಡು ಪ್ಲೆಸಿ – ₹ 1.6 ಕೋಟಿ

ಇಮ್ರಾನ್‌ ತಾಹೀರ್‌ – ₹ 1 ಕೋಟಿ

ಕೊಲ್ಕತ್ತಾ ನೈಟ್‌ ರೈಡರ್ಸ್‌

ಮಿಚೇಲ್‌ ಸ್ಟಾರ್ಕ್‌ – ₹ 9.4 ಕೋಟಿ

ಪಿಯೂಷ್‌ ಚಾವ್ಲಾ – ₹ 9.4 ಕೋಟಿ

ಕ್ರಿಸ್‌ ಲಿನ್‌ – ₹ 9.6 ಕೋಟಿ

ದಿನೇಶ್‌ ಕಾರ್ತಿಕ್‌ – ₹ 7.4 ಕೋಟಿ

ರಾಬಿನ್‌ ಉತ್ತಪ್ಪ –₹ 6.4 ಕೋಟಿ

ಕುಲದೀಪ್‌ ಯಾದವ್‌ – ₹ 5.8 ಕೋಟಿ

ಶುಭಮಾನ್‌ ಗಿಲ್‌ – ₹ 1.8 ಕೋಟಿ

ಇಶಾಂಕ್‌ ಜಗ್ಗಿ – ₹ 20 ಲಕ್ಷ

ಡೆಲ್ಲಿ ಡೇರ್‌ ಡೆವಿಲ್ಸ್‌

ಗ್ಲೇನ್‌ ಮ್ಯಾಕ್ಸ್‌ವೆಲ್‌ – ₹ 9 ಕೋಟಿ

‌ಕಗಿಸೊ ರಬಡಾ – ₹ 4.2 ಕೋಟಿ

ಅಮಿತ್‌ ಮಿಶ್ರಾ – ₹ 4 ಕೋಟಿ

ಮೊಹಮದ್‌ ಶಮಿ – ₹ 3 ಕೋಟಿ

ಗೌತಮ್‌ ಗಂಭೀರ್‌ – ₹ 2.8 ಕೋಟಿ

ಕಾಲಿನ್‌ ಮುನ್ರೋ – ₹ 1.9 ಕೋಟಿ

ಜೇಸನ್‌ ರಾಯ್‌ – ₹ 1.5 ಕೋಟಿ

ಪೃಥ್ವಿ ಶಾ – ₹ 1.2 ಕೋಟಿ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ಕ್ರಿಸ್‌ ವೋಕ್ಸ್‌ –  ₹ 7.4 ಕೋಟಿ

ಯಜುವೇಂದ್ರ ಚಹಾಲ್‌ – ₹ 6 ಕೋಟಿ

ಉಮೇಶ್‌ ಯಾದವ್‌ – ₹ 4.2 ಕೋಟಿ

ಬ್ರೆಂಡನ್‌ ಮೆಕ್ಲಂ – ₹ 3.6 ಕೋಟಿ

ಕ್ವಿಂಟಾನ್‌ ಡಿ ಕಾಕ್‌ – ₹ 2.8 ಕೋಟಿ

ಕಾಲಿನ್‌ ಗ್ರಾಂಡ್‌ಹೋಮ್‌ – ₹ 2.2 ಕೋಟಿ

ಮೋಯಿನ್‌ ಅಲಿ – ₹ 1.7 ಕೋಟಿ

ಮನನ್‌ ವೋಹ್ರಾ –  ₹ 1.1 ಕೋಟಿ

ಮಾರಾಟವಾಗದ ಪ್ರಮುಖ ಆಟಗಾರರು

ಕ್ರಿಸ್‌ ಗೇಲ್‌

ಜೋ ರೂಟ್‌

ಮುರುಳಿ ವಿಜಯ್‌

ಹಾಶೀಂ ಆಮ್ಲಾ

ಮಾರ್ಟಿನ್‌ ಗುಪ್ಟಿಲ್‌

ಜೇಮ್ಸ್‌ ಫಾಲ್ಕನರ್‌

ಪಾರ್ಥಿವ್‌ ಪಟೇಲ್‌

ಜಾನಿ ಬೈರ್ಸ್ಟ್ರೋವ್‌

ನಮನ್‌ ಓಜಾ

ಸ್ಯಾಮ್‌ ಬಿಲ್ಲಿಂಗ್ಸ್‌

ಮಿಚೇಲ್‌ ಜಾನ್ಸನ್‌

ಜೋಸ್‌ ಹ್ಯಾಜಲ್‌ವುಡ್‌

ಟಿಮ್‌ ಸೌಥಿ

ಇಶಾಂತ್‌ ಶರ್ಮಾ

ಮಿ‌ಚೇಲ್‌ ಮೆಕ್ಲೆಂಗನ್‌

ಲಸಿತ್ ಮಾಲಿಂಗ

ಐಸ್‌ ಸೋಧಿ

ಸ್ಯಾಮುಯೆಲ್‌ ಬದ್ರೀ

ಆ್ಯಡಂ ಜಂಪಾ

ಹಿಮಾಂಶು ರಾಣಾ

ಸಿದ್ದೇಶ್‌ ಲಾಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT