2 ವರ್ಷಗಳ ಹಿಂದೆ ತಮಿಳು ಅಕ್ಷರವನ್ನು ನೋಡಿ ಇದೇನು ಜಿಲೇಬಿ ಎಂದು ಕೇಳಿದ್ದ ಹರ್ಭಜನ್‍ ಈಗ ತಮಿಳಿನಲ್ಲೇ ಟ್ವೀಟಿಸಿದರು!

7

2 ವರ್ಷಗಳ ಹಿಂದೆ ತಮಿಳು ಅಕ್ಷರವನ್ನು ನೋಡಿ ಇದೇನು ಜಿಲೇಬಿ ಎಂದು ಕೇಳಿದ್ದ ಹರ್ಭಜನ್‍ ಈಗ ತಮಿಳಿನಲ್ಲೇ ಟ್ವೀಟಿಸಿದರು!

Published:
Updated:
2 ವರ್ಷಗಳ ಹಿಂದೆ ತಮಿಳು ಅಕ್ಷರವನ್ನು ನೋಡಿ ಇದೇನು ಜಿಲೇಬಿ ಎಂದು ಕೇಳಿದ್ದ ಹರ್ಭಜನ್‍ ಈಗ ತಮಿಳಿನಲ್ಲೇ ಟ್ವೀಟಿಸಿದರು!

ಬೆಂಗಳೂರು: ಮಾಡಿದುದನ್ನು ಉಣ್ಣಲೇಬೇಕೆಂದು ಕರ್ಮಸಿದ್ಧಾಂತ. ಇದು ಸಾಮಾಜಿಕ ತಾಣದಲ್ಲಿನ ಚಟುವಟಿಕೆಗೂ ಅನ್ವಯಿಸುತ್ತದೆ ಎಂಬುದಕ್ಕೆ   ಕ್ರಿಕೆಟಿಗ ಹರ್ಭಜನ್ ಸಿಂಗ್ ಟ್ವೀಟ್ ಉದಾಹರಣೆ. ಇಲ್ಲಿಯವರೆಗೆ ಐಪಿಎಲ್‍ ಟಿ20 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡಿದ್ದ ಆಫ್‌ಸ್ಪಿನ್ನರ್‌ ಹರ್ಭಜನ್ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ (ಸಿಎಸ್‍ಕೆ) ಸ್ಥಾನಪಡೆದಿದ್ದಾರೆ.

ಐಪಿಎಲ್‍ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸಿಎಸ್‍ಕೆ ತಂಡ ಹರ್ಭಜನ್ ಅವರನ್ನು  ₹ 2 ಕೋಟಿಗೆ ಖರೀದಿ ಮಾಡಿದೆ. ಸಿಎಸ್‍ಕೆ ತಂಡದಲ್ಲಿ ಸ್ಥಾನಗಳಿಸಿದ ಸಿಂಗ್, ತಮಿಳಿನಲ್ಲಿ ಟ್ವೀಟ್ ಮಾಡಿದ್ದು ಅಭಿಮಾನಿಗಳಿಗೆ ಭಾರಿ ಖುಷಿ ನೀಡಿದೆ.

ಹರ್ಭಜನ್ ಅವರ ಟ್ವೀಟ್‍ಗೆ ತಮಿಳು ಭಾಷಾ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಈ ಟ್ವೀಟ್ 9 ಸಾವಿರಕ್ಕಿಂತಲೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.

ತಮಿಳು ಅಕ್ಷರವನ್ನು ಜಿಲೇಬಿ ಎಂದಿದ್ದರು ಭಜ್ಜಿ

2016ರಲ್ಲಿ ಹರ್ಭಜನ್ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಟ್ವೀಟ್ ಮಾಡಿದ್ದರು. ಆ ವೇಳೆ ತಂಡದ ನಾಯಕರಾಗಿದ್ದ ಮಹೇಂದ್ರ ಸಿಂಗ್ ದೋನಿ ಅವರಿಗೆ ನೀವ್ಯಾಕೆ ಹುಟ್ಟುಹಬ್ಬದ ಶುಭಾಶಯಗಳನ್ನು ಟ್ವೀಟಿಸಿಲ್ಲ ಎಂದು ದೋನಿ ಅಭಿಮಾನಿಗಳು ಪ್ರಶ್ನಿಸಿದ್ದರು.

ಈ ನಡುವೆ ದೇವಾ ಎಂಬವರು ನಿಮ್ಮಲ್ಲಿ ಇಲ್ಲಿಯವರೆಗೆ ಇದ್ದ ಮಾನ ಮರ್ಯಾದೆಯೂ ಹೋಯಿತು ಎಂದು ತಮಿಳಿನಲ್ಲಿ ಟ್ವೀಟಿಸಿದಾಗ, ಆ ಟ್ವೀಟ್‍ನ್ನು ಉಲ್ಲೇಖಿಸಿದ ಭಜ್ಜಿ ಇದೇನು ಜಿಲೇಬಿ ಎಂದು ಕೇಳಿದ್ದರು.

ಇದೀಗ ಹರ್ಭಜನ್ ತಮಿಳಿನಲ್ಲಿ ಟ್ವೀಟ್ ಮಾಡಿದ್ದನ್ನು ನೋಡಿ ಖುಷಿಪಟ್ಟ ತಮಿಳು ಅಭಿಮಾನಿಗಳು ಇದು ಕರ್ಮದ ಫಲ ಎಂದು ಹೇಳಿದ್ದಾರೆ. ತಮಿಳರ ಭಾಷಾ ಪ್ರೇಮವನ್ನು ಮೆಚ್ಚಲೇ ಬೇಕು. ಯಾರೇ ಆಗಿರಲಿ, ತಮ್ಮ ನಾಡಿಗೆ ಬಂದರೆ ತಮಿಳು ಮಾತನಾಡುವಂತೆ ಮಾಡುವ ತಮಿಳರ ಅಭಿಮಾನ ಶ್ಲಾಘನೀಯ ಎಂಬ ಮೆಚ್ಚುಗೆಯ ಮಾತುಗಳೂ ವ್ಯಕ್ತವಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry