ಟ್ವಿಟರ್‍‍ನಲ್ಲಿ ಹೆಚ್ಚು ಟ್ರೆಂಡ್ ಆಗಿದ್ದು #IndiaMeansBusiness ಹ್ಯಾಶ್‍ಟ್ಯಾಗ್

7

ಟ್ವಿಟರ್‍‍ನಲ್ಲಿ ಹೆಚ್ಚು ಟ್ರೆಂಡ್ ಆಗಿದ್ದು #IndiaMeansBusiness ಹ್ಯಾಶ್‍ಟ್ಯಾಗ್

Published:
Updated:
ಟ್ವಿಟರ್‍‍ನಲ್ಲಿ ಹೆಚ್ಚು ಟ್ರೆಂಡ್ ಆಗಿದ್ದು #IndiaMeansBusiness ಹ್ಯಾಶ್‍ಟ್ಯಾಗ್

ವಾಷಿಂಗ್ಟನ್: ಭಾರತದಲ್ಲಿ ಹೂಡಿಕೆಯನ್ನು ಆಕರ್ಷಿಸಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪರಿಶ್ರಮಕ್ಕೆ ಸಾಮಾಜಿಕ ಮಾಧ್ಯಮಗಳೂ ಸಾಥ್ ನೀಡಿವೆ. ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಗೆ ಸಂಬಂಧಪಟ್ಟಂತೆ ಟ್ವಿಟರ್‍‍ನಲ್ಲಿ ಟ್ರೆಂಡ್ ಆದ ಹ್ಯಾಶ್‍ಟ್ಯಾಗ್‍ಗಳಲ್ಲಿ  #IndiaMeansBusiness ಎಂಬ ಹ್ಯಾಶ್‍ಟ್ಯಾಗ್‍ ಬಳಸಿ ಹೆಚ್ಚು ಜನರು ಟ್ವೀಟ್‍ ಮಾಡಿದ್ದಾರೆ.

39, 251 ಬಾರಿ ಈ ಹ್ಯಾಶ್‌ಟ್ಯಾಗ್ ಬಳಕೆಯಾಗಿದೆ ಎಂದು ಅಂತರ ರಾಷ್ಟ್ರೀಯ ಸಾಮಾಜಿಕ ಮಾಧ್ಯಮ ವಿಶ್ಲೇಷಣೆ ಕಂಪನಿ ಟಾಕ್‍ವಾಕರ್ ಹೇಳಿದ. ಅಮೆರಿಕ ಫಸ್ಟ್  ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನ ಮೂರನೇ ಸ್ಥಾನದಲ್ಲಿದೆ (31,449 ಬಾರಿ ಈ ಹ್ಯಾಶ್‍ಟ್ಯಾಗ್ ಬಳಕೆಯಾಗಿದೆ) ಇನ್ನುಳಿದಂತೆ women (35,837), America First (31,449), wealth (22,896), AI (19,018), globalism (16,513), climate change (15,477), fake news (13,567) ಮತ್ತು Blockchain (12,918) ಎಂಬ ಹ್ಯಾಶ್‍ಟ್ಯಾಗ್‍ಗಳು ಟ್ರೆಂಡಿಂಗ್ ಪಟ್ಟಿಯಲ್ಲಿದೆ.

ಅದೇ ವೇಳೆ ಈ ಶೃಂಗಸಭೆಯಲ್ಲಿ  ಅತೀ ಹೆಚ್ಚು ಚರ್ಚೆಗೊಳಗಾದ ವ್ಯಕ್ತಿ ಟ್ರಂಪ್ ಆಗಿದ್ದಾರೆ. ಶೃಂಗಸಭೆ ನಡೆದ ನಾಲ್ಕು ದಿನಗಳ ಅವಧಿಯಲ್ಲಿ 2.73 ಲಕ್ಷ ಬಾರಿ ಟ್ರಂಪ್  ಹೆಸರು ಉಲ್ಲೇಖ (Mention) ಮಾಡಲಾಗಿದೆ. ಎರಡನೇ ಸ್ಥಾನ ನರೇಂದ್ರ ಮೋದಿಯವರಿಗಿದೆ (62,227 ಬಾರಿ). ಪ್ರಸ್ತುತ ಶೃಂಗಸಭೆಯ ಮೊದಲನೇ ದಿನ ಭಾರತದಲ್ಲಿ ವ್ಯವಹಾರ ಸಾಧ್ಯತೆಗಳ ಬಗ್ಗೆ ಮೋದಿ ಮಾಡಿದ ಭಾಷಣ ಟ್ವಿಟರ್‍‍ನಲ್ಲಿ ಹೆಚ್ಚು ಚರ್ಚಿತವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry