ವೇಗಿಗಳ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ: ಭಾರತಕ್ಕೆ 63 ರನ್‌ ಭರ್ಜರಿ ಜಯ

7

ವೇಗಿಗಳ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ: ಭಾರತಕ್ಕೆ 63 ರನ್‌ ಭರ್ಜರಿ ಜಯ

Published:
Updated:
ವೇಗಿಗಳ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ: ಭಾರತಕ್ಕೆ 63 ರನ್‌ ಭರ್ಜರಿ ಜಯ

ಜೋಹಾನ್ಸ್‌ಬರ್ಗ್: ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಭಾರತ 63 ರನ್ ಜಯ ಸಾಧಿಸಿದೆ. 

ಮೊಹಮ್ಮದ್‌ ಶಮಿ 5, ಜಸ್‌ಪ್ರೀತ್‌ ಬೂಮ್ರಾ 2, ಇಶಾಂತ್‌ ಶರ್ಮಾ 2 ವಿಕೆಟ್‌ ಪಡೆದು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

ಭಾರತ ಮೊದಲ ಇನಿಂಗ್ಸ್‌ನಲ್ಲಿ 187ರನ್‌ ಗಳಿಸಿ ಆಲೌಟ್‌ ಆಗಿತ್ತು. ಈ ಗುರಿ ಬೆನ್ನತ್ತಿದ ಅತಿಥೇಯರು 194 ರನ್‌ ಗಳಿಸಿ ಆಲೌಟ್‌ ಆಗಿ 7 ರನ್‌ ಮುನ್ನಡೆ ಸಾಧಿಸಿದರು. 

ಭಾರತ ಎರಡನೇ ಇನಿಂಗ್ಸ್‌ನಲ್ಲಿ 247ರನ್‌ ಗಳಿಸಿ ಆಲೌಟ್‌ ಆಯಿತು. 241ರನ್‌ ಗುರಿ ಬೆನ್ನತ್ತಿದ ಅತಿಥೇಯರು ನಾಲ್ಕನೇ ದಿನದಾಟವಾದ ಶನಿವಾರ 73.3 ಓವರ್‌ಗಳಲ್ಲಿ 177 ರನ್‌ ಗಳಿಸಿ ಆಲೌಟ್‌ ಆಗಿದೆ. 

ಮೂರು ‍ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 2–1ರಲ್ಲಿ ದಕ್ಷಿಣ ಆಫ್ರಿಕಾ ಸರಣಿ ಜಯ ಸಾಧಿಸಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry