ಚೆನ್ನೈ ಸೀನಿಯರ್ ಕಿಂಗ್ಸ್..!

7

ಚೆನ್ನೈ ಸೀನಿಯರ್ ಕಿಂಗ್ಸ್..!

Published:
Updated:
ಚೆನ್ನೈ ಸೀನಿಯರ್ ಕಿಂಗ್ಸ್..!

ಬೆಂಗಳೂರು: ಎರಡು ವರ್ಷಗಳ ಅಮಾನತು ಶಿಕ್ಷೆ ಅನುಭವಿಸಿದ ನಂತರ ಕಣಕ್ಕಿಳಿಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸ್‌ ಶನಿವಾರ ತನ್ನ ತಂಡಕ್ಕೆ ಬಹುತೇಕ ಹಿರಿಯ ಆಟಗಾರರನ್ನೇ ಆಯ್ಕೆ ಮಾಡಿಕೊಂಡಿದ್ದು ವಿಶೇಷ. 30 ವರ್ಷ ವಯಸ್ಸು ದಾಟಿದ ಹತ್ತು ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಇದು ಟ್ವಿಟರ್‌ನಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಗಿದೆ. ಮಹೇಂದ್ರಸಿಂಗ್ ದೋನಿ (36 ವರ್ಷ), ಇಮ್ರಾನ್ ತಾಹೀರ್ (38), ಹರ್ಭಜನ್ ಸಿಂಗ್ (37), ಶೇನ್ ವಾಟ್ಸನ್ (36), ಡ್ವೇನ್ ಬ್ರಾವೊ (34), ಫಾಫ್ ಡುಪ್ಲೆಸಿ (33), ಕೇದಾರ್ ಜಾಧವ್ (32), ಸುರೇಶ್ ರೈನಾ (31), ಅಂಬಟಿ ರಾಯುಡು (32), ಕರಣ್ ಶರ್ಮಾ (31) ಅವರು ತಂಡದಲ್ಲಿ ಸೇರ್ಪಡೆಯಾಗಿದ್ದಾರೆ. ಆದ್ದರಿಂದ ಈ ಬಳಗವನ್ನು ಕೆಲವರು ‘ಚೆನ್ನೈ ಸೀನಿಯರ್ ಕಿಂಗ್ಸ್’ ಎಂದು ವ್ಯಂಗ್ಯವಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ತಮಿಳುನಾಡಿನ ಎಐಡಿಎಂಕೆ ಪಕ್ಷದ ಪದಾಧಿಕಾರಿ ಹರಿಪ್ರಭಾಕರನ್, ‘ಇವತ್ತು ಸಿಎಸ್‌ಕೆ ತಂಡವನ್ನು ಎಲ್ಲರೂ ಟೀಕಿಸುತ್ತಿದ್ದಾರೆ. ಆಟಗಾರರ ವಯಸ್ಸಿಗಿಂತ ಅನುಭವವೇ ಮುಖ್ಯ. ಆಶಿಶ್ ನೆಹ್ರಾ ಅವರು ನಮ್ಮ ಈ ತಂಡದಲ್ಲಿ ಆಡಿದ ನಂತರವೇ ಮತ್ತೊಮ್ಮೆ ರಾಷ್ಟ್ರೀಯತಂಡಕ್ಕೆ ಆಯ್ಕೆಯಾಗಿದ್ದನ್ನು ಮರೆಯಬೇಡಿ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry