ಕಬಡ್ಡಿ: ಸ್ವಸ್ತಿಕ್ ತಂಡಕ್ಕೆ ಜಯ

7

ಕಬಡ್ಡಿ: ಸ್ವಸ್ತಿಕ್ ತಂಡಕ್ಕೆ ಜಯ

Published:
Updated:

ಬೆಂಗಳೂರು: ಸ್ವಸ್ತಿಕ್ ತಂಡದವರು ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಅವಿಜ್ಞ ಕ್ಲಬ್ ವತಿಯ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯ ಶನಿವಾರದ ಪಂದ್ಯದಲ್ಲಿ ಗೆದ್ದಿದ್ದಾರೆ.

ಸ್ವಸ್ತಿಕ್ ತಂಡ 38–12ರಲ್ಲಿ ಭಗತ್ ಸಿಂಗ್ ಸ್ಪೋರ್ಟ್ಸ್‌ ಕ್ಲಬ್‌ ತಂಡವನ್ನು ಮಣಿಸಿತು. ದಿನದ ಇತರ ಪಂದ್ಯಗಳಲ್ಲಿ ಶ್ರೀ ದುರ್ಗಾ ತಂಡ 38–30ರಲ್ಲಿ ಬಾಗಲಕೋಟೆ ಜಿಲ್ಲೆ ವಿರುದ್ಧವೂ, ಚಿಕ್ಕಬಳ್ಳಾಪುರದ ಅರ್ಜುನ್ ತಂಡ 32–10ರಲ್ಲಿ ಓಂಕಾರ್ ಸ್ಪೋರ್ಟ್ಸ್ ಕ್ಲಬ್ ಮೇಲೂ, ಅಟ್ಟೂರ್ ತಂಡ 28–23ರಲ್ಲಿ ಜಿ.ಎನ್‌ ಹಳ್ಳಿ ವಿರುದ್ಧವೂ ಗೆಲುವು ದಾಖಲಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry