ಗರ್ಭಪಾತ ಕಾನೂನಿನ ಪ್ರಚಾರ: ಲಿಯೊ

7

ಗರ್ಭಪಾತ ಕಾನೂನಿನ ಪ್ರಚಾರ: ಲಿಯೊ

Published:
Updated:

ಲಂಡನ್‌: ದೇಶದಲ್ಲಿರುವ ನಿರ್ಬಂಧಿತ ಗರ್ಭಪಾತ ಕಾನೂನಿನ ಉದಾರೀಕರಣ ಸಂಬಂಧ, ಮುಂದಿನ ತಿಂಗಳು ನಡೆಯಲಿರುವ ಜನಾಭಿಪ್ರಾಯದಲ್ಲಿ ಪ್ರಚಾರ ನಡೆಸುವುದಾಗಿ ಐರ್ಲೆಂಡ್‌ ಪ್ರಧಾನಿ ಲಿಯೊ ವಾರಡ್ಕರ್ ತಿಳಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ನಿಲುವುಗಳಲ್ಲಿ ಸಾಕಷ್ಟು ಬದಲಾವಣೆಯಾಗಿರುವುದಾಗಿ ಅವರು ತಿಳಿಸಿದ್ದಾರೆ.

2012ರಲ್ಲಿ ಭಾರತೀಯ ಮೂಲದ ದಂತವೈದ್ಯೆ ಸವಿತಾ ಹಾಲಪ್ಪನವರ ಗಾಲ್ವೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಜೀವ ಅಪಾಯದಲ್ಲಿ ಇದ್ದರೂ ಗರ್ಭಪಾತಕ್ಕೆ ಅಲ್ಲಿಯ ವೈದ್ಯರು ನಿರಾಕರಿಸಿದ್ದರು. ನಂತರ ಸವಿತಾ ವಿಪರೀತ ರಕ್ತಸ್ರಾವದಿಂದ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಐರ್ಲೆಂಡ್‌ನ ಕಾನೂನಿನ ಕುರಿತು ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ವ್ಯಾಪಕ ಚರ್ಚೆ, ಪ್ರತಿಭಟನೆ ನಡೆದಿತ್ತು.

ಇದಾದ ನಂತರ, ತಾಯಿ ಜೀವ ಅಪಾಯಕ್ಕೆ ಸಿಲುಕಿದ ಸಂದರ್ಭಗಳಲ್ಲಿ ಗರ್ಭಪಾತ ಮಾಡಿ ಆಕೆಯನ್ನು ರಕ್ಷಿಸಲು ಐರ್ಲೆಂಡ್‌ ಸರ್ಕಾರವು ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry