ಸುಮಿತ್‌, ಕಮಾನಿ ಚಾಂಪಿಯನ್‌

7

ಸುಮಿತ್‌, ಕಮಾನಿ ಚಾಂಪಿಯನ್‌

Published:
Updated:
ಸುಮಿತ್‌, ಕಮಾನಿ ಚಾಂಪಿಯನ್‌

ಬೆಂಗಳೂರು: ಛತ್ತೀಸಗಡದ ಸುಮಿತ್ ತಲ್ವಾರ್ ಹಾಗೂ ಮಧ್ಯಪ್ರದೇಶದ ಅಮೀ ಕಮಾನಿ ಶನಿವಾರ ಇಲ್ಲಿ ಮುಕ್ತಾಯಗೊಂಡ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಪುರುಷರ ವಿಭಾಗದ ಫೈನಲ್‌ನಲ್ಲಿ ಸುಮಿತ್‌ (6–1) 57–49, 45–77, 66–39, 80–51, 76–44, 66–58, 61–54ರಲ್ಲಿ ಆರ್‌ಎಸ್‌ಪಿಬಿ ತಂಡದ ಮಲ್ಕೀತ್‌ ಸಿಂಗ್‌ಗೆ ಸೋಲುಣಿಸಿದರು. ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮನನ್ ಚಂದ್ರ ಅವರು ಶಹಬಾಜ್ ವಿರುದ್ಧ ಗೆದ್ದರು.

ವರ್ಷಾಗೆ ಸೋಲು: ಮಹಿಳೆಯರ ವಿಭಾಗದಲ್ಲಿ ಕರ್ನಾಟಕದ ವರ್ಷಾ ಸೋತಿದ್ದಾರೆ. ಅಮೀ ಕಮಾನಿ 39–65, 67–21, 54–57, 43–48, 71–46, 59–24, 50–38ರಲ್ಲಿ ವರ್ಷಾ ಎದುರು ಜಯಿಸಿದರು. ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಪ್ಲೇ ಆಫ್‌ನಲ್ಲಿ ಕರ್ನಾಟಕದ ವಿದ್ಯಾ ಪಿಳ್ಳೈ 17–59, 62–49, 70–25ರಲ್ಲಿ ಕೀರತ್‌ ಭಂಡಾಲ್‌ ವಿರುದ್ಧ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry