ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪುಗೆಗೂ, ಭಾವನೆಗಳಿಗೂ ಇದೆ ನಂಟು: ಅಧ್ಯಯನ

Last Updated 27 ಜನವರಿ 2018, 19:30 IST
ಅಕ್ಷರ ಗಾತ್ರ

ಬರ್ಲಿನ್: ಒಬ್ಬರು ಮತ್ತೊಬ್ಬರನ್ನು ಯಾವ ಕಡೆ (ಎಡ ಅಥವಾ ಬಲ) ಅಪ್ಪಿಕೊಳ್ಳುತ್ತಾರೆ ಎಂದು ನಿರ್ಧರಿಸುವಲ್ಲಿ ಭಾವನೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಜರ್ಮನಿಯ ಬೋಚಮ್ ವಿಶ್ವವಿದ್ಯಾಲಯದ ಅಧ್ಯಯನ ವರದಿ ಅಭಿಪ್ರಾಯಪಟ್ಟಿದೆ.

‘ಸಾಮಾನ್ಯ ಸಂದರ್ಭಗಳಿಗೆ ಹೋಲಿಸಿದರೆ, ಭಾವತೀವ್ರತೆಯ ಪ್ರಸಂಗಗಲ್ಲಿ ಜನರು ಪರಸ್ಪರ ಎಡಗಡೆಯಿಂದ ಅಪ್ಪಿಕೊಳ್ಳುತ್ತಾರೆ’ ಎಂದು ಸಂಶೋಧಕರು ಹೇಳಿದ್ದಾರೆ. ಅಪ್ಪುಗೆಯ ವೇಳೆ ಕೈ ಹಾಗೂ ಪಾದಗಳ ಚಲನೆಯನ್ನೂ ಸೂಕ್ಷ್ಮವಾಗಿ ಗಮನಿಸಲಾಗಿದೆ.

ಬೀದಿಯಲ್ಲಿ ಹೋಗುವಾಗ ಚಿತ್ರನಟರು ಅಪರಿಚಿತರಿಗೆ ಕಣ್ಣುಮುಚ್ಚಿಕೊಂಡವರ ರೀತಿ ನೀಡುವ ಅಪ್ಪುಗೆಯ ಸುಮಾರು 500 ದೃಶ್ಯಗಳನ್ನೂ ಸಂಶೋಧಕರು ವಿಶ್ಲೇಷಣೆಗೆ ಒಳಪಡಿಸಿದ್ದಾರೆ.

‘ಸಾಮಾನ್ಯ ಸಂದರ್ಭಗಳಲ್ಲಿ ಬಲಗಡೆಯಿಂದ ಅಪ್ಪಿಕೊಳ್ಳಲು ಜನರು ಮುಂದಾಗುತ್ತಾರೆ’ ಎಂದು ಹಿಂದಿನ ಅಧ್ಯಯನ ವರದಿಗಳನ್ನು ಆಧರಿಸಿ ಸೈಕಲಾಜಿಕಲ್ ರಿಸರ್ಜ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯು ಇದನ್ನು ದೃಢಪಡಿಸಿದೆ.

‘ಅಪ್ಪುಗೆಯು ಹುಟ್ಟಿನಿಂದಲೂ ಮನುಷ್ಯರ ನಡುವಿನ ಸಾಮಾಜಿಕ ಸಂವಹನದ ಭಾಗವಾಗಿದೆ. ಜನರು ವಿವಿಧ ಸಂದರ್ಭಗಳಲ್ಲಿ ಅಪ್ಪುಗೆ ಮೂಲಕ ಪ್ರೀತಿ, ವಾತ್ಸಲ್ಯ ವ್ಯಕ್ತಪಡಿಸುತ್ತಾರೆ’ ಎಂದಿದೆ ವರದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT