7

ಪ್ರಶಸ್ತಿ ಸುತ್ತಿಗೆ ಸೈನಾ ನೆಹ್ವಾಲ್‌

Published:
Updated:
ಪ್ರಶಸ್ತಿ ಸುತ್ತಿಗೆ ಸೈನಾ ನೆಹ್ವಾಲ್‌

ಜಕಾರ್ತ: ಭಾರತದ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್‌ ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶನಿವಾರ ಫೈನಲ್ ಪ್ರವೇಶಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಸೈನಾ 21–19, 21–19ರಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಥಾಯ್ಲೆಂಡ್‌ನ ರಾಚನಕ್ ಇಂಟನಾನ್ ಅವರಿಗೆ ಸೋಲುಣಿಸಿದ್ದಾರೆ.

ನೇರ ಗೇಮ್‌ಗಳಿಂದ ಸೈನಾ 48 ನಿಮಿಷಗಳಲ್ಲಿ ಪಂದ್ಯ ಗೆದ್ದರು. ಹೋದ ವರ್ಷ ನಡೆದ ಮಲೇಷ್ಯಾ ಮಾಸ್ಟರ್ಸ್‌ ಫೈನಲ್‌ನಲ್ಲಿ ಸೈನಾ ಚೀನಾ ತೈಪೆಯ ತೈ ಜು ಯಿಂಗ್ ಎದುರು ಗೆದ್ದಿದ್ದರು. ಆ ಬಳಿಕ ಯಾವುದೇ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿಲ್ಲ.

ಆರಂಭಿಕ ಗೇಮ್‌ನಲ್ಲಿ ಸೈನಾ 3–1ರ ಮುನ್ನಡೆ ಪಡೆದರು. ಆದರೆ ಇಂತೆನಾನ್ ಕೊನೆಯ ಹಂತದವರೆಗೂ ಎಡೆಬಿಡದೆ ಹೋರಾಟ ನಡೆಸಿದರು. ಚುರುಕಿನ ಆಟ ಹಾಗೂ ನಿಖರ ಸ್ಮ್ಯಾಷ್‌ಗಳಿಂದ ಗಮನಸೆಳೆದ ಭಾರತದ ಆಟಗಾರ್ತಿ ಗೇಮ್‌ ಗೆದ್ದರು.

ಎರಡನೇ ಗೇಮ್‌ನ ಆರಂಭದಲ್ಲಿಯೂ ಸೈನಾ 6–1ರಲ್ಲಿ ಮುನ್ನಡೆ ಪಡೆದರು. ದೀರ್ಘರ‍್ಯಾಲಿಗಳನ್ನು ಆಡಿದ ಅವರು ಇಂಟನಾನ್‌ ಮೇಲೆ ಒತ್ತಡ ಹೇರಿದರು. ಆದರೆ ಥಾಯ್ಲೆಂಡ್‌ನ ಆಟಗಾರ್ತಿ ಸಮಬಲದ ಹೋರಾಟ ನಡೆಸಿದರು. 17–11ರವರೆಗೆ ಮುನ್ನಡೆ ಹೆಚ್ಚಿಸಿಕೊಂಡ ಸೈನಾ ಕೊನೆಯ ಹಂತದಲ್ಲಿ ಸ್ಮ್ಯಾಷ್‌ ಹಾಗೂ ರಿಟರ್ನ್‌ಗಳಿಂದ ಗೇಮ್‌ ಗೆದ್ದುಕೊಂಡರು.

ಫೈನಲ್‌ನಲ್ಲಿ ಸೈನಾ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ತೈವಾನ್‌ನ ತೈ ಜು ಯಿಂಗ್‌ ಎದುರು ಆಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry