ಟ್ರಂಪ್‌ ಜೊತೆ ಸಂಬಂಧ ವದಂತಿ ಅಸಂಬದ್ಧ: ನಿಕ್ಕಿ

7

ಟ್ರಂಪ್‌ ಜೊತೆ ಸಂಬಂಧ ವದಂತಿ ಅಸಂಬದ್ಧ: ನಿಕ್ಕಿ

Published:
Updated:
ಟ್ರಂಪ್‌ ಜೊತೆ ಸಂಬಂಧ ವದಂತಿ ಅಸಂಬದ್ಧ: ನಿಕ್ಕಿ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಯನ್ನು ಅಲ್ಲಗಳೆದಿರುವ ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ ನಿಕ್ಕಿ ಹ್ಯಾಲೆ, ‘ಇದು ಅತ್ಯಂತ ಆಕ್ರಮಣಕಾರಿ ಮತ್ತು ಅಸಂಬದ್ಧ ಸಂಗತಿ’ ಎಂದಿದ್ದಾರೆ.

‘ಈ ವದಂತಿ ಶುದ್ಧ ಸುಳ್ಳು’ ಎಂದೂ ಅಮೆರಿಕದ ಸಂಪುಟ ದರ್ಜೆಯ ಅಧಿಕಾರಿ ಹಾಗೂ ಭಾರತ ಸಂಜಾತೆ ನಿಕ್ಕಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

‌‘ಏರ್‌ಫೋರ್ಸ್ ಒನ್‌ನಲ್ಲಿ ಒಮ್ಮೆ ನಾನು ಅಧ್ಯಕ್ಷರ ಜೊತೆಗಿದ್ದೆ ಆ ವೇಳೆ ಹಲವು ಮಂದಿ ಇದ್ದರು’ ಎಂದು ಹ್ಯಾಲೆ ಸ್ಪಷ್ಟಪಡಿಸಿದ್ದಾರೆ.

ನ್ಯೂಯಾರ್ಕ್‌ನ ಲೇಖಕ ಮೈಕೆಲ್‌ ವೂಲ್ಫ್‌ ಅವರ ‘ಫೈರ್‌ ಅಂಡ್‌ ಫ್ಯೂರಿ’ ಪುಸ್ತಕದಲ್ಲಿ ತಮ್ಮ ಬಗ್ಗೆ ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯಿ

ಸಿರುವ ನಿಕ್ಕಿ,‘ ನಾನು ನನ್ನ ರಾಜಕೀಯ ಭವಿಷ್ಯದ ಬಗ್ಗೆ ಹಲವು ಬಾರಿ ಅಧ್ಯಕ್ಷರ ಜೊತೆ ಮಾತನಾಡಿದ್ದೇನೆ ಎಂದು ಮೈಕೆಲ್‌ ಪುಸ್ತಕದಲ್ಲಿ ಹೇಳಿದ್ದಾರೆ. ಆದರೆ ನಾನೂ ಎಂದಿಗೂ ಈ ವಿಷಯದ ಕುರಿತು ಮಾತನಾಡಿಲ್ಲ ಮತ್ತು ಅವರೊಂದಿಗೆ ಒಬ್ಬಂಟಿಯಾಗಿ ಇರಲಿಲ್ಲ’ ಎಂದಿದ್ದಾರೆ.

‘ನನ್ನ ರಾಜಕೀಯ ಜೀವನದಲ್ಲಿ ಈ ಹಿಂದೆಯೂ ‌ಹಲವು ಆರೋಪಗಳನ್ನು ಎದುರಿಸಿದ್ದೇನೆ. ಅನೇಕ ಪುರುಷರು ಮಹಿಳೆಯರನ್ನು ಗೌರವಿಸುತ್ತಾರೆ. ಆದರೆ ಕೆಲವು ಪುರುಷರು ಮಹಿಳೆಯರು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾ ಮುಕ್ತವಾಗಿ ಮಾತನಾಡುತ್ತಿದ್ದರೆ ಅಂಥವರನ್ನು ತುಳಿಯಲು ನೋಡು

ತ್ತಾರೆ. ಮಾನಸಿಕವಾಗಿ ಕುಗ್ಗಿಸಲು ನೋಡುವ ಮೂಲಕ ಸೋಲಿಸಲು ಪ್ರಯತ್ನಿಸುತ್ತಾರೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry