‘ಅಲ್ಪಸಂಖ್ಯಾತರು’ ಪದ ಕೈಬಿಟ್ಟ ಸರ್ಕಾರ

7

‘ಅಲ್ಪಸಂಖ್ಯಾತರು’ ಪದ ಕೈಬಿಟ್ಟ ಸರ್ಕಾರ

Published:
Updated:
‘ಅಲ್ಪಸಂಖ್ಯಾತರು’ ಪದ ಕೈಬಿಟ್ಟ ಸರ್ಕಾರ

ಬೆಂಗಳೂರು: ಕೋಮು ಗಲಭೆಗಳಲ್ಲಿ ಎಲ್ಲ ಮುಗ್ಧರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಸಂಬಂಧ ಗೃಹ ಇಲಾಖೆ ಶನಿವಾರ ಹೊಸ ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ‘ಅಲ್ಪಸಂಖ್ಯಾತರು’ ಎಂಬ ಪದ ತೆಗೆದು ಹಾಕಿದೆ.

ಕೋಮು ಗಲಭೆಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಕೈಬಿಡುವ ಬಗ್ಗೆ ಪೊಲೀಸ್‌ ಕಮಿಷನರ್‌ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠರಿಗೆ ಪತ್ರ ಬರೆದು ಅಭಿಪ್ರಾಯ ಕೇಳಿತ್ತು. ಈ ಕ್ರಮದ ಬಗ್ಗೆ ವಿರೋಧ ಪಕ್ಷ ಬಿಜೆಪಿ ಟೀಕೆ ಮಾಡಿತ್ತು.

ನ್ಯಾ. ರಾಜೇಂದ್ರ ಸಾಚಾರ್‌ ವರದಿ ಅನ್ವಯ ಅಲ್ಪಸಂಖ್ಯಾತರ ಕುಂದುಕೊರತೆ ಪರಿಹರಿಸಲು ಸಚಿವ ಸಂಪುಟ ಉಪ ಸಮಿತಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ವರದಿ ಕೇಳಿತ್ತು. ಇದರ ಅನ್ವಯ ಒಳಾಡಳಿತ ಇಲಾಖೆ ಅಲ್ಪಸಂಖ್ಯಾತರ ಮೇಲಿನ ಪ್ರಕರಣಗಳನ್ನು ಕೈಬಿಡಲು ಮಾಹಿತಿ ಕೇಳಿ ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆ ಹೊರಡಿಸುವಾಗ ‘ಮುಗ್ಧ ಅಲ್ಪಸಂಖ್ಯಾತರ ವಿರುದ್ಧದ ಪ್ರಕರಣ’ ಎಂಬ ವಾಕ್ಯ ಕಣ್ತಪ್ಪಿನಿಂದ ನಮೂದಾಗಿತ್ತು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಶನಿವಾರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry