₹ 2,084 ಕೋಟಿ ಮೌಲ್ಯದ ತೆಂಗು ಉತ್ಪನ್ನ ರಫ್ತು

7

₹ 2,084 ಕೋಟಿ ಮೌಲ್ಯದ ತೆಂಗು ಉತ್ಪನ್ನ ರಫ್ತು

Published:
Updated:
₹ 2,084 ಕೋಟಿ ಮೌಲ್ಯದ ತೆಂಗು ಉತ್ಪನ್ನ ರಫ್ತು

ನವದೆಹಲಿ: 2016–17ನೇ ಆರ್ಥಿಕ ವರ್ಷದಲ್ಲಿ ಭಾರತದಿಂದ ₹ 2,084 ಕೋಟಿ ಮೌಲ್ಯದ ತೆಂಗು ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ತಿಳಿಸಿದ್ದಾರೆ.

ಮಲೇಷ್ಯಾ, ಇಂಡೋನೇಷ್ಯಾ ಮತ್ತು ಶ್ರೀಲಂಕಾ ದೇಶಗಳಿಗೆ 2016ರಲ್ಲಿ ತೆಂಗು ಉತ್ಪನ್ನಗಳ ರಫ್ತು ಆರಂಭಿಸಲಾಯಿತು.  ಅದಕ್ಕೂ ಮೊದಲು ಆ ದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತಿದ್ದೆವು ಎಂದು ಅವರು ಮಾಹಿತಿ ನೀಡಿದ್ದಾರೆ.

ಬಿಹಾರದ ಪಟ್ನಾದಲ್ಲಿ ತೆಂಗು ಅಭಿವೃದ್ಧಿ ಮಂಡಳಿಯ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ತೆಂಗು ಉತ್ಪಾದನೆ ಹೆಚ್ಚಳ,  ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ರಫ್ತು ಉತ್ತೇಜನದ ಕೆಲಸವನ್ನು ಮಂಡಳಿ ನಿರ್ವಹಣೆ ಮಾಡಲಿದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry