ಶೇ 100 ಎಫ್‌ಡಿಐ ಕೇಂದ್ರದ ಒಪ್ಪಿಗೆ ಕೇಳಿದ ಐಡಿಯಾ

7

ಶೇ 100 ಎಫ್‌ಡಿಐ ಕೇಂದ್ರದ ಒಪ್ಪಿಗೆ ಕೇಳಿದ ಐಡಿಯಾ

Published:
Updated:
ಶೇ 100 ಎಫ್‌ಡಿಐ ಕೇಂದ್ರದ ಒಪ್ಪಿಗೆ ಕೇಳಿದ ಐಡಿಯಾ

ನವದೆಹಲಿ: ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮಿತಿಯನ್ನು ಶೇ 100ಕ್ಕೆ ಹೆಚ್ಚಿಸಲು ಅನುಮತಿ ನೀಡುವಂತೆ ದೂರಸಂಪರ್ಕ ಸಂಸ್ಥೆಯಾಗಿರುವ ಐಡಿಯಾ ಸೆಲ್ಯುಲರ್‌ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಕೈಗಾರಿಕಾ ನೀತಿ ಮತ್ತು ಉತ್ತೇಜನ ಮಂಡಳಿ (ಡಿಐಪಿ‍ಪಿ) ಅರ್ಜಿ ಸಲ್ಲಿಸಲಾಗಿದೆ ಎಂದು ಹೂಡಿಕೆದಾರರಿಗೆ ಮಾಹಿತಿ ನೀಡಿದೆ.

ಐಡಿಯಾದಲ್ಲಿ ಸದ್ಯ ಎಫ್‌ಡಿಐ ಶೇ 27 ರಷ್ಟಿದೆ. ದೂರಸಂಪರ್ಕ ಕಂಪನಿಗಳಲ್ಲಿ ಶೇ 100ರಷ್ಟು ಎಫ್‌ಡಿಐಗೆ ಅವಕಾಶವಿದೆ. ಇದರಲ್ಲಿ ಶೇ 49 ರವರೆಗಿನ ಮೊತ್ತಕ್ಕೆ ಸರ್ಕಾರದ ಅನುಮತಿ ಅಗತ್ಯವಿಲ್ಲ. ಅದಕ್ಕೂ ಹೆಚ್ಚಿನ ಪ್ರಮಾಣದ ಎಫ್‌ಡಿಐಗೆ ಸರ್ಕಾರದ ಅನುಮತಿ ಪಡೆಯಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry