‘ಸಚಿವ ಸ್ಥಾನ ಹೋದ ಬಳಿಕ ಅವರನ್ನು ಯಾರೂ ಕೇಳುವುದಿಲ್ಲ’

7

‘ಸಚಿವ ಸ್ಥಾನ ಹೋದ ಬಳಿಕ ಅವರನ್ನು ಯಾರೂ ಕೇಳುವುದಿಲ್ಲ’

Published:
Updated:
‘ಸಚಿವ ಸ್ಥಾನ ಹೋದ ಬಳಿಕ ಅವರನ್ನು ಯಾರೂ ಕೇಳುವುದಿಲ್ಲ’

ಕಲಬುರ್ಗಿ: ‘ಕೆಲವು ಸಚಿವರು ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ, ಸ್ಥಾನ ಹೋದ ಬಳಿಕ ಅವರನ್ನು ಯಾರೂ ಕೇಳುವುದಿಲ್ಲ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ಹೇಳಿದರು.

ಆಳಂದ ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆ ಸಚಿವರಿಗೆ ದೇವರೆ ಒಳ್ಳೆಯ ಬುದ್ಧಿಯನ್ನು ಕೊಡಬೇಕು. ಯಾರು ಪ್ರತ್ಯೇಕತೆ ಬಯಸುತ್ತಾರೋ ಅವರು ಹೋಗಬಹುದು. ಈ ಬಗ್ಗೆ ಚರ್ಚಿಸಲು ಸಭೆ ಕರೆದರೂ ಬರದೆ ಅವರೇ ಹೊರಗಡೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ತೊಡಗಿಸಿಕೊಂಡಿರುವವರು ಚುನಾವಣೆ ಮುಗಿದ ಬಳಿಕ ನಮ್ಮ ಬಳಿ ಬರುತ್ತಾರೆ’ ಎಂದ ಅವರು, ಲಿಂಗಾಯತ ಸ್ವತಂತ್ರ ಧರ್ಮ ಪರಿಣತರ ಸಮಿತಿ ನೀಡುವ ವರದಿಯನ್ನು ನಾವು ಒಪ್ಪುವುದಿಲ್ಲ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry