ಪೇಮೆಂಟ್ಸ್‌ ಬ್ಯಾಂಕ್‌ಗಳಲ್ಲಿಯೂ ಅಟಲ್‌ ಪಿಂಚಣಿ ಯೋಜನೆ

7

ಪೇಮೆಂಟ್ಸ್‌ ಬ್ಯಾಂಕ್‌ಗಳಲ್ಲಿಯೂ ಅಟಲ್‌ ಪಿಂಚಣಿ ಯೋಜನೆ

Published:
Updated:
ಪೇಮೆಂಟ್ಸ್‌ ಬ್ಯಾಂಕ್‌ಗಳಲ್ಲಿಯೂ ಅಟಲ್‌ ಪಿಂಚಣಿ ಯೋಜನೆ

ನವದೆಹಲಿ: ಪೇಮೆಂಟ್ಸ್‌ ಬ್ಯಾಂಕ್‌ಗಳು ಮತ್ತು ಸಣ್ಣ ಹಣಕಾಸು ಬ್ಯಾಂಕ್‌ಗಳಲ್ಲಿಯೂ ಅಟಲ್‌ ಪಿಂಚಣಿ ಯೋಜನೆ (ಎಪಿವೈ) ಲಭ್ಯವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಹೆಚ್ಚಿನ ಜನರಿಗೆ ಯೋಜನೆ ತಲುಪಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಿಂಚಣಿ ಯೊಜನೆಯ ಭಾಗವಾಗುವುದರಿಂದ ಪಿಂಚಣಿದಾರರ ಸಮಾಜ ನಿರ್ಮಾಣ ಮಾಡುವುದಲ್ಲದೆ ಬ್ಯಾಂಕ್‌ಗಳಿಗೂ ಪ್ರತಿ ಖಾತೆಗೆ ₹ 120 ರಿಂದ

₹ 150ರವರೆಗೆ ಉತ್ತೇಜನ ಮೊತ್ತ ಬರಲಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ 11 ಪೇಮೆಂಟ್ಸ್‌ ಬ್ಯಾಂಕ್‌ ಮತ್ತು 10 ಸಣ್ಣ ಹಣಕಾಸು ಬ್ಯಾಂಕ್‌ ಸ್ಥಾಪನೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಒಪ್ಪಿಗೆ ನೀಡಿದೆ. ಬ್ಯಾಂಕ್ ಅಥವಾ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ಹೊಂದಿರುವವರು ಎಪಿಐ ಖಾತೆ ತೆರೆಯಬಹುದು. 60 ವರ್ಷದ ಬಳಿಕ ತಿಂಗಳಿಗೆ ಕನಿಷ್ಠ ₹ 1,000 ದಿಂದ ಗರಿಷ್ಠ ₹5,000ದವರೆಗೆ ಪಿಂಚಣಿ ಸಿಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry