‘ನಾಟಕ ಚಟುವಟಿಕೆಗೆ ರಂಗಮಂದಿರ ಸ್ಫೂರ್ತಿಯಾಗಲಿ’

7

‘ನಾಟಕ ಚಟುವಟಿಕೆಗೆ ರಂಗಮಂದಿರ ಸ್ಫೂರ್ತಿಯಾಗಲಿ’

Published:
Updated:

ಬೆಂಗಳೂರು: ‘ಈ ಗ್ರಾಮದ ಜನರಿಗೆ ನಾಟಕ ಚಟುವಟಿಕೆಗಳಿಗೆ ತೊಡಗಿಕೊಳ್ಳಲು ಬಯಲು ರಂಗಮಂದಿರ ನಿರ್ಮಿಸಲಾಗಿದೆ. ಉತ್ತಮ ನಾಟಕಗಳು ಇಲ್ಲಿ ಪ್ರದರ್ಶನಗೊಳ್ಳಲಿ’ ಎಂದು ಶಾಸಕ ಎಸ್‌.ಮುನಿರಾಜು ತಿಳಿಸಿದರು.

ಪೀಣ್ಯ ದಾಸರಹಳ್ಳಿ ಸಮೀಪ ಸೋಮಶೆಟ್ಟಿಹಳ್ಳಿಯಲ್ಲಿ ಬಯಲು ರಂಗಮಂದಿರ ಉದ್ಘಾಟಸಿ ಅವರು ಮಾತನಾಡಿದರು. ರಸ್ತೆಗಳಿಲ್ಲದ ಈ ಗ್ರಾಮಕ್ಕೆ ವಿಶಾಲವಾದ ರಸ್ತೆಗಳು, ಬಸ್ ಸೌಲಭ್ಯ, ವಿದ್ಯುತ್ ದೀಪಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರುತಿ ಸುರೇಶ್, ಮಾಜಿ ಗ್ರಾ.ಪಂ. ಅಧ್ಯಕ್ಷ ಚಿಕ್ಕ ಬಯಲಪ್ಪ, ಜಿ.ಪಂ. ಸದಸ್ಯ ಜಿ.ಮರಿಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry