ಬಿಎಂಟಿಸಿ: ಮೂವರು ಸಂಚರಿಸಿದರೆ ಶೇ 15ರಷ್ಟು ಗುಂ‍ಪು ರಿಯಾಯಿತಿ

7

ಬಿಎಂಟಿಸಿ: ಮೂವರು ಸಂಚರಿಸಿದರೆ ಶೇ 15ರಷ್ಟು ಗುಂ‍ಪು ರಿಯಾಯಿತಿ

Published:
Updated:

ಬೆಂಗಳೂರು: ಸಮೂಹ ಸಾರಿಗೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬಿಎಂಟಿಸಿ ‘ಗುಂಪು ರಿಯಾಯಿತಿ ಪ್ರಯಾಣ’ ವ್ಯವಸ್ಥೆ ಕಲ್ಪಿಸಿದೆ.

ವಾಯು ವಜ್ರ ಬಸ್‌ಗಳಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಮಂದಿ ಒಟ್ಟಾಗಿ ಪ್ರಯಾಣಿಸಿದರೆ ಟಿಕೆಟ್‌ ದರದ ಮೇಲೆ ಶೇ 15ರಷ್ಟು ರಿಯಾ

ಯಿತಿ ನೀಡಲಾಗುತ್ತದೆ. ಇದು ಶನಿವಾರದಿಂದಲೇ ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ.

ಪ್ರಥಮ ಹಂತದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್‌ ಸಿಟಿಗೆ ಕಾರ್ಯಾಚರಣೆಯಾಗುವ ಮಾರ್ಗ ಸಂಖ್ಯೆ ಕೆಐಎಎಸ್-8 ರಲ್ಲಿ ಪ್ರಯಾಣಿಸುವವರಿಗೆ ಮಾತ್ರ ಇದು ಅನ್ವಯಿಸುತ್ತದೆ. ಮುಂದಿನ ದಿನಗಳಲ್ಲಿ ಎಲ್ಲಾ ವಾಯು ವಜ್ರ ಬಸ್‌ಗಳಿಗೆ ಈ ಸೌಲಭ್ಯ ವಿಸ್ತರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry