ಇಂದು ‘ಬೆಂಗಳೂರು ಮೌಂಟೆನ್‌ ಫೆಸ್ಟಿವಲ್‌’

7

ಇಂದು ‘ಬೆಂಗಳೂರು ಮೌಂಟೆನ್‌ ಫೆಸ್ಟಿವಲ್‌’

Published:
Updated:

ಬೆಂಗಳೂರು: ನಂದಿ ಬೆಟ್ಟ ರಸ್ತೆಯ ತಿಮ್ಮರಾಯಸ್ವಾಮಿ ಬೆಟ್ಟದಲ್ಲಿ ಇದೇ 28ರಂದು 3ನೇ ವರ್ಷದ ‘2ಗೋ ಬೆಂಗಳೂರು ಮೌಂಟೆನ್‌ ಫೆಸ್ಟಿವಲ್’ ನಡೆಯಲಿದೆ. ದೇಶ ವಿದೇಶದ ಅಥ್ಲೀಟ್‌ಗಳು ಹಾಗೂ ಸೈಕ್ಲಿಸ್ಟ್‌‌ಗಳು ಧೈರ್ಯ ಮತ್ತು ಸಾಹಸ ಇಲ್ಲಿ ಪ್ರದರ್ಶಿಸಲಿದ್ದಾರೆ.

ಬೆಳಿಗ್ಗೆ 7ರಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆಯಲಿರುವ ಈ ಕ್ರೀಡಾ ಹಬ್ಬದಲ್ಲಿ ಅತ್ಯಂತ ಸವಾಲಿನಿಂದ ಕೂಡಿದ ಸ್ಪರ್ಧೆಗಳಿರಲಿವೆ. ಸೈಕ್ಲಿಸ್ಟ್‌ಗಳಾದ ಲಂಡನ್‌ನ ಟಾಮ್‌ ಲಿಟಲ್‌, ಆಸ್ಟ್ರೇಲಿಯಾದ ಕ್ರೆಗ್‌ ರೈನ್ಸ್‌, ನೇಪಾಳದ ರಾಜೇಶ್‌ ಮಗರ್‌, ಕೀನ್ಯಾದ ಇಬ್ಬರು ಅಥ್ಲೀಟ್‌ಗಳು ಸೇರಿ 800 ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

ಕಲ್ಲು ಬಂಡೆಗಳ ನಡುವಿನ ಗುಡ್ಡಗಾಡು ಜಾಗದಲ್ಲಿ 10 ಕಿ.ಮೀ. ದೂರದ ರಸ್ತೆ ಓಟ, 21 ಕಿ.ಮೀ. ದೂರದ ಹಾಫ್‌ ಮ್ಯಾರಾಥಾನ್‌, 35 ಕಿ.ಮೀ. ದೂರದ ಸೈಕ್ಲಿಂಗ್‌ ಸ್ಪರ್ಧೆ, ನಂದಿಹಿಲ್‌ ಉಪಚಾರ್‌ ಜಂಕ್ಷನ್‌ನಿಂದ 4 ಕಿ.ಮೀ.

ದೂರದ ಸತಾಯು ರಿಟ್ರೀಟ್‌ ಬಳಿ 800 ಮೀಟರ್‌ ಉದ್ದದ ‘ಡೌನ್‌ ಹಿಲ್‌ ರೇಸ್‌’ ಆಯೋಜಿಸಲಾಗಿದೆ. ಇದರಲ್ಲಿ 21 ಅಡಿ ದೂರ

ಸೈಕಲ್‌ ಹಾರಿಸುವ ರೋಚಕ ಸ್ಪರ್ಧೆಯೂ ಇರಲಿದೆ. ಯುಎಇಯಿಂದಲೂ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry