ಗ್ರಾಮದೇವತೆಗಳ ಉತ್ಸವ

7

ಗ್ರಾಮದೇವತೆಗಳ ಉತ್ಸವ

Published:
Updated:
ಗ್ರಾಮದೇವತೆಗಳ ಉತ್ಸವ

ಬೆಂಗಳೂರು: ಕೆ.ಆರ್.ಪುರದ ಕೆ.ಚನ್ನಸಂದ್ರ ಹಾಗೂ ಕನಕನಗರದಲ್ಲಿಗ್ರಾಮದೇವತೆಗಳ ಹೂವಿನ ಪಲ್ಲಕ್ಕಿ ಉತ್ಸವವು ಶುಕ್ರವಾರ ನಡೆಯಿತು.

ಪ್ರತಿ ಮೂರು ವರ್ಷಕೊಮ್ಮೆ ಈ ಉತ್ಸವ ನಡೆಯುತ್ತದೆ. ಮಧುರಮ್ಮ, ಕಾವೇರಮ್ಮ, ಮಾರಮ್ಮ, ಮಹೇಶ್ವರಮ್ಮ, ಕಾಟೇರಮ್ಮ, ದೊಡ್ಡಮ್ಮ ಸೇರಿದಂತೆ 14 ದೇವರ ಮೂರ್ತಿಗಳ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ನಡೆಯಿತು.

ಕಂಸಾಳೆ, ವೀರಗಾಸೆ, ಕೀಲುಕುದುರೆ, ಗೊರವನ ಕುಣಿತ, ಡೊಳ್ಳುಕುಣಿತ, ತಮಟೆ ಹಾಗೂ ಮಂಗಳವಾದ್ಯವು ಇತ್ತು. ಕಲ್ಕೆರೆ, ಬಿಳೇಶಿವಾಲೆ, ಹೊರಮಾವು, ಭೈರತಿ, ರಾಮಮೂರ್ತಿನಗರ, ರಾಂಪುರ ಹಾಗೂ ಸುತ್ತಮುತ್ತಲ ಸ್ಥಳಗಳ ಸಾವಿರಾರು ಜನ ಉತ್ಸವದಲ್ಲಿ ಭಾಗಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry