ಉತ್ತರ ಪ್ರದೇಶದಲ್ಲಿ ‘ವಂದೇ ಮಾತರಂ’ ಪಠಿಸಿದ್ದಕ್ಕೇ ಹತ್ಯೆ; ಕರ್ನಾಟಕದಲ್ಲಿ ಆರ್‌ಎಸ್ಎಸ್‌-ಬಿಜೆಪಿ ಕಾರ್ಯಕರ್ತರ ಪಾಡೇನು ಊಹಿಸಿ: ಸಿ.ಟಿ.ರವಿ ಟ್ವೀಟ್

7

ಉತ್ತರ ಪ್ರದೇಶದಲ್ಲಿ ‘ವಂದೇ ಮಾತರಂ’ ಪಠಿಸಿದ್ದಕ್ಕೇ ಹತ್ಯೆ; ಕರ್ನಾಟಕದಲ್ಲಿ ಆರ್‌ಎಸ್ಎಸ್‌-ಬಿಜೆಪಿ ಕಾರ್ಯಕರ್ತರ ಪಾಡೇನು ಊಹಿಸಿ: ಸಿ.ಟಿ.ರವಿ ಟ್ವೀಟ್

Published:
Updated:
ಉತ್ತರ ಪ್ರದೇಶದಲ್ಲಿ ‘ವಂದೇ ಮಾತರಂ’ ಪಠಿಸಿದ್ದಕ್ಕೇ ಹತ್ಯೆ; ಕರ್ನಾಟಕದಲ್ಲಿ ಆರ್‌ಎಸ್ಎಸ್‌-ಬಿಜೆಪಿ ಕಾರ್ಯಕರ್ತರ ಪಾಡೇನು ಊಹಿಸಿ: ಸಿ.ಟಿ.ರವಿ ಟ್ವೀಟ್

ಬೆಂಗಳೂರು: ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಎರಡು ಕೋಮಿನ ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಚಂದನ್‌ ಗುಪ್ತಾ ಮೃತಪಟ್ಟಿದ್ದರು. ಈ ಸಂಬಂಧ ಟ್ವಿಟರ್‌ನಲ್ಲಿ #IamChandanGupta ಟ್ರೆಂಡ್‌ ಸೃಷ್ಟಿಯಾಗಿದೆ.

‘ಯಾವುದೇ ಪಕ್ಷಕ್ಕೆ ಸೇರಿರದ ಚಂದನ್‌ ಗುಪ್ತಾ ‘ವಂದೇ ಮಾತರಂ’ ಪಠಿಸಿದ್ದಕ್ಕೇ ಹತ್ಯೆಯಾಗುವುದಾದರೆ, ಜಿಹಾದಿಗಳನ್ನು ಬೆಂಬಲಿಸುತ್ತಿರುವ ಕೋಮುವಾದಿ ಕಾಂಗ್ರೆಸ್‌ ಸರ್ಕಾರವಿರುವ ಕರ್ನಾಟಕದಲ್ಲಿ ಆರ್‌ಎಸ್ಎಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಪಾಡೇನು ಊಹಿಸಿ’ ಎಂದು ಶಾಸಕ ಸಿ.ಟಿ.ರವಿ ಟ್ವೀಟಿಸಿದ್ದಾರೆ.

ಇದೇ ಹ್ಯಾಷ್‌ಟ್ಯಾಗ್‌ ಬಳಸಿ ಉತ್ತರ ಪ್ರದೇಶದಲ್ಲಿನ ಹಿಂಸಾಚಾರ ಕುರಿತು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry