ಬಿಜಿಡಿ-103 ಕಡಲೆ ತಳಿ: ಅಧಿಕ ಇಳುವರಿ

7

ಬಿಜಿಡಿ-103 ಕಡಲೆ ತಳಿ: ಅಧಿಕ ಇಳುವರಿ

Published:
Updated:
ಬಿಜಿಡಿ-103 ಕಡಲೆ ತಳಿ: ಅಧಿಕ ಇಳುವರಿ

ರಾಯಚೂರು: ಕಡಲೆ ತಳಿ ಬಿಜಿಡಿ 103 ದಪ್ಪ ಗಾತ್ರದ ದೇಶಿ ತಳಿಯಾಗಿದ್ದು, ಜೆಜಿ-11 ತಳಿಗಿಂತಲೂ ಅಧಿಕ ಇಳುವರಿ ಕೊಡುತ್ತದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಬೀಜ ವಿಭಾಗದ ವಿಶೇಷಾಧಿಕಾರಿ ಡಾ.ಬಸವೇಗೌಡ ಹೇಳಿದರು.

ತಾಲ್ಲೂಕಿನ ಮೀರಾಪುರ ಗ್ರಾಮದ ವಿದ್ಯಾ ಪ್ರಭು ಪಾಟೀಲ ಅವರ ಜಮೀನಿನಲ್ಲಿ ಈಚೆಗೆ ಏರ್ಪಡಿಸಿದ್ದ ಬೀಜೋತ್ಪಾದನಾ ತರಬೇತಿ ಮತ್ತು ಕಡಲೆ ತಳಿ ಬಿಜಿಡಿ 103 ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.

ರೈತರು ಸಂಘಟಿತರಾಗುವ ಮೂಲಕ ವಿವಿಧ ಸವಲತ್ತುಗಳನ್ನು ಉಪಯೋಗಿಸಿಕೊಂಡು ತಮ್ಮ ಆದಾಯವನ್ನು ಹೆಚ್ಚಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಸಲಹೆ ನೀಡಿದರು.

ಕಿರಿಯ ತಳಿ ತಜ್ಞ ಡಾ.ಲೊಕೇಶ್.ಜಿ.ವೈ., ರೈತ ಮುಖಂಡರಾದ ವಿಶ್ವನಾಥ ಸಾಹುಕಾರ, ಪ್ರಭುದೇವ ಪಾಟೀಲ, ಓಬಳೇಶ್, ಮೀರಾಪುರ, ಯಂಕಣ್ಣಗೌಡ ಮತ್ತು ಪಮ್ಮನಗೌಡ ಮಲ್ಲಪೂರು, ವೇಣಗೋಪಾಲ್, ಶುಶಾಂತ್ ಗೌಡ, ಎಚ್. ತಿಮ್ಮಪೂರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry