ಕುಕನೂರು: ನೂತನ ತಾಲ್ಲೂಕು ಉದ್ಘಾಟನೆ

7

ಕುಕನೂರು: ನೂತನ ತಾಲ್ಲೂಕು ಉದ್ಘಾಟನೆ

Published:
Updated:

ಕುಕನೂರು: ರಾಜ್ಯ ಸರ್ಕಾರ ಜನೋಪಯೋಗಿ ಯೋಜನೆಗಳ ಮೂಲಕ ಬಡವರ, ಶೋಷಿತರ ಬದುಕಿಗೆ ಭದ್ರ ಬುನಾದಿ ಹಾಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಇಲ್ಲಿ ಶುಕ್ರವಾರ ಕುಕನೂರು ನೂತನ ತಾಲ್ಲೂಕ ಕಚೇರಿ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕುಕನೂರು ತಾಲ್ಲೂಕನ್ನು ಮಾದರಿಯಾಗಿ ಮಾಡುವುದಾಗಿ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಕನಗವಲ್ಲಿ ಮಾತನಾಡಿ, ಕುಕನೂರು ತಾಲ್ಲೂಕು ಆಗಿರುವುದು ಅಭಿವೃದ್ಧಿಗೆ ಪೂರಕವಾಗಿದೆ. ಕಚೇರಿಗೆ ಅಗತ್ಯವಾದ ವ್ಯವಸ್ಥೆ ಮತ್ತು ಸಿಬ್ಬಂದಿ ನೇಮಕ ಮಾಡಲಿದ್ದು, ಶೀಘ್ರ ಕಾರ್ಯರೂಪಕ್ಕೆ ಬರಲಿದೆ ಎಂದರು.

ಪಟ್ಟಣ ಮಹಾಮಾಯ ದೇವಸ್ಥಾನದಿಂದ ಡೊಳ್ಳು, ನಗಾರಿ, ವಿವಿಧ ಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಾಂತಲಾ ರಾಮಣ್ಣ ಬಂಕದಮನಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ, ಉಪವಿಭಾಗಾಧಿಕಾರಿ ರವಿ. ಎಂ ತಿರ್ಲಾಪೂರ, ತಹಶೀಲ್ದಾರ್‌ ರಮೇಶ ಅಳವುಂಡಿಕರ್, ಪಿಎಸ್‌ಐ ಜಿ.ಎಸ್‌ ರಾಘವೇಂದ್ರ, ಸಾಹಿತಿ ಕೆ.ಬಿ ಬ್ಯಾಳಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry