ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದ ಹಕ್ಕು ಚಲಾಯಿಸಿ

Last Updated 28 ಜನವರಿ 2018, 9:41 IST
ಅಕ್ಷರ ಗಾತ್ರ

ಗುಡಿಬಂಡೆ: ಮತದಾರರು ಸಂವಿಧಾನಬ್ಧವಾಗಿ ನೀಡಿರುವ ಮತದಾನದ ಹಕ್ಕನ್ನು ಭಯವಿಲ್ಲದೆ ಚಲಾಯಿಸಿ ಎಂದು ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಎಂ.ವಿನೋದ್ ಕುಮಾರ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಈಚೆಗೆ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಹಶೀಲ್ದಾರ್ ಕೆ.ಮುನಿರಾಜು ಮಾತನಾಡಿ, ‘18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡಲು ಅರ್ಹರಾಗಿದ್ದು, ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತದಾನ ಮಾಡಬೇಕು. ಪ್ರತಿ ವರ್ಷ ಜನವರಿ 25ರಂದು ಭಾರತೀಯ ಚುನಾವಣೆ ಆಯೋಗ ಹೊಸ ಮತದಾರರ ದಿನವನ್ನಾಗಿ ಆಚರಿಸುತ್ತಿದೆ ಎಂದರು. ಮತದಾರರ ಪ್ರತಿಜ್ಞಾ ವಿಧಿ ಬೋಧನೆ ಮಾಡಿ ಹೊಸ ಮತದಾರರಿಗೆ ಗುರುತಿನ ಕಾರ್ಡ್ ವಿತರಣೆ ಮಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುನಿರಾಜು, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಶಿಕ್ಷಣಾಧಿಕಾರಿ, ವೆಂಕಟರಮಣಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಮಹಿಮಾ, ಕಂದಾಯ ಇಲಾಖೆಯ ವೈ.ಎಲ್.ಹನುಮಂತರಾವ್, ಎಚ್.ಎನ್. ನರಸಿಂಹಯ್ಯ, ಹರಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಸಿ.ಅಶ್ವತ್ಥರೆಡ್ಡಿ, ವಕೀಲರಾದ ನಾರಾಯಣಸ್ವಾಮಿ, ನಂದೀಶರೆಡ್ಡಿ, ಎ.ಎಸ್.ಐ. ಗುರುಮೂರ್ತಿ ಇದ್ದರು.

ನಮ್ಮ ಮನೆಯಲ್ಲಿ ಮತದಾನ ಮಾಡಲು ಹೋಗುವುದನ್ನು ನೋಡಿದ್ದೆವು. ಪೋಷಕರ ಜತೆಯಲ್ಲಿ ನಿಂತು ಬರುತ್ತಿದ್ದೆವು. ಕಾಲೇಜಿನಲ್ಲೂ ಹಿರಿಯರು ಇಂಥ ವಿಷಯ ಹೇಳುತ್ತಿದ್ದನ್ನು ಕೇಳಿದ್ದೆವು. ಈಗ ನಾವೂ ಅವರ ಪಟ್ಟಿಗೆ ಸೇರಿದ್ದೇವೆ ಎನ್ನುವ ಖುಷಿಯಿದೆ. ಭಾರತದಲ್ಲಿ ಮತದಾನ ಮಾಡುವ ಹಕ್ಕಿದೆ ಎಂದರೆ ಅದರ ವಿಶೇಷತೆಯೇ ಬೇರೆ.
ಪಿ.ವಿ.ನಿತ್ಯಶ್ರೀ, ಬಿಕಾಂ ವಿದ್ಯಾರ್ಥಿ, ಗುಡಿಬಂಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT