ದೇಶದ ಗಣತಂತ್ರ ವ್ಯವಸ್ಥೆ ವಿಶ್ವಕ್ಕೆ ಮಾದರಿ: ಟಿ. ರಘುಮೂರ್ತಿ

7

ದೇಶದ ಗಣತಂತ್ರ ವ್ಯವಸ್ಥೆ ವಿಶ್ವಕ್ಕೆ ಮಾದರಿ: ಟಿ. ರಘುಮೂರ್ತಿ

Published:
Updated:

ಚಳ್ಳಕೆರೆ: ಮಾದರಿ ಗಣತಂತ್ರ ವ್ಯವಸ್ಥೆಯಿಂದಾಗಿ ವಿಶ್ವಕ್ಕೇ ದೇಶ ಮಾದರಿ  ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು. ಇಲ್ಲಿನ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ 69ನೇ ಗಣರಾಜ್ಯೋತ್ಸವ ಅಧ್ಯಕ್ಷತೆ ವಹಿಸಿ  ಮಾತನಾಡಿದರು.

ಸ್ವಾತಂತ್ರ್ಯ ಪಡೆದ ನಂತರ  ದೇಶದಲ್ಲಿ ಆಡಳಿತ ವ್ಯವಸ್ಥೆ ಸುಧಾರಣೆಗಾಗಿ ಪ್ರಜಾತಾಂತ್ರಿಕ ವ್ಯವಸ್ಥೆ ಜಾರಿಯಾದ ನೆನಪಿಗಾಗಿ ಗಣರಾಜ್ಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ವ್ಯವಸ್ಥೆ ಜಾರಿಯಾಗಲು ಕಾರಣರಾದ ಎಲ್ಲಾ ದೇಶ ಪ್ರೇಮಿಗಳನ್ನು ನೆನೆಯುವ ಜತೆಗೆ ಅವರ ಆದರ್ಶಗಳನ್ನು ಯುವ ಸಮೂಹ ಮೈಗೂಡಿಸಿಕೊಳ್ಳಬೇಕು ಎಂದರು.

ತಹಶೀಲ್ದಾರ್‌ ಟಿ. ಕಾಂತರಾಜ್‌, ‘ನೂರಾರು ಜಾತಿ, ಭಾಷೆ, ಧರ್ಮಗಳಿದ್ದರೂ ಏಕತೆಯಿಂದ ಸಾಮರಸ್ಯ ಮೆರೆಯುವ ಮೂಲಕ ಬಾಳುತ್ತಿರುವುದು  ದೇಶದ ವಿಶೇಷ. ಇದಕ್ಕೆ ಎಂದಿಗೂ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು’ ಎಂದರು.

ಬೆಸ್ಕಾಂ ಹಾಗೂ ಪೊಲೀಸ್‌ ಇಲಾಖೆ ನಡೆಸಿಕೊಟ್ಟ ರೂಪಕಗಳು ಗಮನ ಸೆಳೆದವು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷೆ ಬೋರಮ್ಮ, ಉಪಾಧ್ಯಕ್ಷ ಟಿ. ವಿಜಯಕುಮಾರ್‌ ಹಾಗೂ ಸದಸ್ಯರು, ಎಪಿಎಂಸಿ ಅಧ್ಯಕ್ಷ ಶಿವಣ್ಣ, ತಾಲ್ಲೂಕು ಪಂಚಾಯ್ತಿ ಇಒ ಈಶ್ವರ ಪ್ರಸಾದ್‌, ಸದಸ್ಯರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry