'ಆನ್‌ಲೈನ್‌ ಪರೀಕ್ಷೆ ನಿಲ್ಲಿಸುವವರೆಗೂ ಬಿಜೆಪಿಗೆ ಮತ ನೀಡೆವು': ಮಧ್ಯ ಪ್ರದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಜ್ಞೆ!

7

'ಆನ್‌ಲೈನ್‌ ಪರೀಕ್ಷೆ ನಿಲ್ಲಿಸುವವರೆಗೂ ಬಿಜೆಪಿಗೆ ಮತ ನೀಡೆವು': ಮಧ್ಯ ಪ್ರದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಜ್ಞೆ!

Published:
Updated:
'ಆನ್‌ಲೈನ್‌ ಪರೀಕ್ಷೆ ನಿಲ್ಲಿಸುವವರೆಗೂ ಬಿಜೆಪಿಗೆ ಮತ ನೀಡೆವು': ಮಧ್ಯ ಪ್ರದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಜ್ಞೆ!

ಇಟರ್ಸಿ: ಆನ್‌ಲೈನ್‌ ಪರೀಕ್ಷೆ ನಿಲ್ಲಿಸುವವರೆಗೂ ಬಿಜೆಪಿಗೆ ಯಾವುದೇ ರೀತಿ ಬೆಂಬಲ ನೀಡುವುದಿಲ್ಲ ಹಾಗೂ ಆ ಪಕ್ಷಕ್ಕೆ ಮತ ನೀಡದಿರಲು ಇಲ್ಲಿನ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿಜ್ಞೆ ತೆಗೆದುಕೊಂಡಿದ್ದಾರೆ.

ಮಧ್ಯ ಪ್ರದೇಶದ ಇಟರ್ಸಿಯ ‘ವಿಜಯಲಕ್ಷ್ಮಿ ಕೈಗಾರಿಕಾ ತರಬೇತಿ ಸಂಸ್ಥೆ’ಯಲ್ಲಿ ಬೋಧಕರು ವಿದ್ಯಾರ್ಥಿಗಳಿಗೆ ಪ್ರತಿಜ್ಞೆಯ ಸಾಲುಗಳನ್ನು ಬೋಧಿಸಿದ್ದಾರೆ. ಎಎನ್‌ಐ ಈ ಕುರಿತ ವಿಡಿಯೊ ಪ್ರಕಟಿಸಿದೆ.

‘ಆನ್‌ಲೈನ್‌ ಪರೀಕ್ಷೆ ನಿಲ್ಲಿಸುವವರೆಗೂ ಬಿಜೆಪಿಗೆ ಯಾವುದೇ ರೀತಿ ಬೆಂಬಲ ನೀಡುವುದಿಲ್ಲ ಹಾಗೂ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವುದಿಲ್ಲ. ಮುಂದಿನ 24 ಗಂಟೆಗಳಲ್ಲಿ ಕನಿಷ್ಠ ಮೂವರಿಗೆ ಈ ಕುರಿತು ತಿಳಿಸಿ ಪ್ರತಿಜ್ಞೆ ಪಡೆಯುವಂತೆ ಹೇಳುವೆ. ಬಿಜೆಪಿಯ ಭ್ರಷ್ಟಾಚಾರ, ಅನ್ಯಾಯದ ಕುರಿತು ನಮ್ಮ ಸುತ್ತಲಿನವರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತೇನೆ’ ಎಂದು ಪ್ರತಿಜ್ಞೆ ಪಡೆದಿದ್ದಾರೆ.

ಜ.26, ಗಣರಾಜ್ಯೋತ್ಸವದ ದಿನದ ಕಾರ್ಯಕ್ರಮದಲ್ಲಿ ಈ ಪ್ರತಿಜ್ಞೆ ಪಡೆಯಲಾಗಿದೆ. ಮಧ್ಯ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry