‘ಟಿಕೆಟ್‌ ಸಿಗದಿದ್ದರೆ ಬಂಡಾಯ ಖಚಿತ’

7

‘ಟಿಕೆಟ್‌ ಸಿಗದಿದ್ದರೆ ಬಂಡಾಯ ಖಚಿತ’

Published:
Updated:

ರಾಣೆಬೆನ್ನೂರು: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದೇವೆ. ಒಂದು ವೇಳೆ ಪಕ್ಷದಿಂದ ಈ ಬಾರಿ ಟಿಕೆಟ್‌ ಕೊಡದೇ ಇದ್ದ ಪಕ್ಷದಲ್ಲಿ, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿ ಪ್ರಧಾನ ಕಾರ್ಯದರ್ಶಿ ರುಕ್ಮಿಣಿ ಸಾವುಕಾರ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಪಕ್ಷದಿಂದಲೇ ಸಾಕಷ್ಟು ಬೆಳೆದಿದ್ದೇವೆ. ಪಕ್ಷದ ಅಭಿವೃದ್ಧಿಗಾಗಿ ಈವರೆಗೂ ದುಡಿದು ಶಕ್ತಿ ಕಳೆದುಕೊಂಡಿದ್ದೇವೆ. ಆದರೆ, ನಾವು ರಾಜಕೀಯ ಸನ್ಯಾಸಿಗಳಲ್ಲ. ಕಾಂಗ್ರೆಸ್‌ ಪಕ್ಷವು ಮಹಿಳೆಯರಿಗೆ ಟಿಕೆಟ್‌ ನೀಡುವಲ್ಲಿ ಮಲತಾಯಿ ಧೋರಣೆ ತೋರುತ್ತಿದೆ ಎಂದು ದೂರಿದರು.

ಪಕ್ಷದ ಅನೇಕ ಮಹಿಳೆಯರು ಅನ್ಯಾಯ ಸಹಿಸಿಕೊಂಡು ಟಿಕಿಟ್‌ನಿಂದ ವಂಚಿತರಾಗಿ ಸತ್ತೇ ಹೋಗಿದ್ದಾರೆ. ಪುರುಷರು ಹೆಚ್ಚಿನ ದಬ್ಬಾಳಿಕೆ ಮಾಡುತ್ತಲೇ ಬಂದಿದ್ದಾರೆ. ನಮ್ಮ ಕೂಗು ಹೈಕಮಾಂಡ್‌ಗೆ ಕೇಳುವುದಿಲ್ಲ. ನಾವು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ, ನಮ್ಮ ಶಕ್ತಿ ಏನು ಅನ್ನುವುದನ್ನು ತೋರಿಸುತ್ತೇವೆ ಎಂದರು.

ನಗರದ ಪ್ರಶಾಂತಿ ಎಜ್ಯುಕೇಶನ್‌ ಸೊಸೈಟಿಯ ಓಂ ಪಬ್ಲಿಕ್‌ ಸ್ಕೂಲ್‌ಗೆ ಎಸ್‌ಎಸ್‌ಎಲ್‌ಸಿ (ಸಿಬಿಎಸ್ಸಿ ಪಠ್ಯಕ್ರಮದ) ವಾರ್ಷಿಕ ಪರೀಕ್ಷೆಯ ಕೇಂದ್ರ ದೊರೆತಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ತುಂಬ ಅನುಕೂಲವಾಗಲಿದೆ ಎಂದರು. ಪ್ರಾಚಾರ್ಯ ಸಮರೇಂದ್ರ ಪಾಣಿಗ್ರಹಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry