ಐಪಿಎಲ್‌ ಪ್ರವೇಶ ಪಡೆದ ನೇಪಾಳದ ಆಟಗಾರ ಸಂದೀಪ್‌

7

ಐಪಿಎಲ್‌ ಪ್ರವೇಶ ಪಡೆದ ನೇಪಾಳದ ಆಟಗಾರ ಸಂದೀಪ್‌

Published:
Updated:
ಐಪಿಎಲ್‌ ಪ್ರವೇಶ ಪಡೆದ ನೇಪಾಳದ ಆಟಗಾರ ಸಂದೀಪ್‌

ಬೆಂಗಳೂರು: ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ನೇಪಾಳದ ಆಟಗಾರ ಸ್ಥಾನ ಪಡೆದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) 11ನೇ ಆವೃತ್ತಿ ಹರಾಜು ಪ್ರಕ್ರಿಯೆಯಲ್ಲಿ ಭಾನುವಾರ ದೆಹಲಿ ಡೇರ್‌ಡೆವಿಲ್ಸ್‌ ತಂಡ ನೇಪಾಳದ ಸಂದೀಪ್‌ ಲಮಿಚ್ಹಾನೆಯನ್ನು ಖರೀದಿಸಿದೆ.

17 ವರ್ಷ ವಯಸ್ಸಿನ ನೇಪಾಳಿ ಆಟಗಾರ ಸಂದೀಪ್‌ ₹20 ಲಕ್ಷ ಮೊತ್ತಕ್ಕೆ ಖರೀದಿಯಾದರು. 2016ರ ಕಿರಿಯರ (ಅಂಡರ್‌ 19) ವಿಶ್ವಕಪ್‌ ಟೂರ್ನಿಯಲ್ಲಿ ಲೆಗ್‌ಸ್ಪಿನ್ನರ್‌ ಸಂದೀಪ್‌ ನೇಪಾಳ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಕಿರಿಯರ ವಿಶ್ವಕಪ್‌ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರ ಪೈಕಿ ಇವರು ಎರಡನೇ ಸ್ಥಾನ ಪಡೆದಿದ್ದರು.

ಹರಾಜಾಗದೆ ಉಳಿದಿದ್ದ ವೆಸ್ಟ್ ಇಂಡೀಸ್‌ ಆಟಗಾರ ಕ್ರಿಸ್‌ ಗೇಲ್‌, ಹರಾಜು ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲವೇ ನಿಮಿಷ ಬಾಕಿ ಇರುವಂತೆ ಕಿಂಗ್ಸ್‌ ಇಲೆವೆಲ್‌ ಪಂಜಾಬ್‌ ಪಾಲಾದರು. ಮೂಲ ಬೆಲೆ ₹2 ಕೋಟಿಗೆ ಖರೀದಿ ಅಂತಿಮವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry