ಭೂತದೊಂದಿಗೆ ಮದುವೆ

5

ಭೂತದೊಂದಿಗೆ ಮದುವೆ

Published:
Updated:
ಭೂತದೊಂದಿಗೆ ಮದುವೆ

ಬಗೆಬಗೆ ರೀತಿಯಲ್ಲಿ ಮದುವೆಯಾಗುವುದು ಈಗ ಟ್ರೆಂಡ್. ಐರ್ಲೆಂಡ್‌ನ ಮಹಿಳೆಯೊಬ್ಬರು ದೆವ್ವವನ್ನು ಮದುವೆಯಾಗಿದ್ದಾರೆ. ಅಮಂಡಾ ಟಿಯಾಗ್‌ ಎನ್ನುವ ಮಹಿಳೆ 300 ವರ್ಷಗಳ ಹಿಂದೆ ಸಾವಿಗೀಡಾದ ಜಾಕ್‌ ಅನ್ನು ವರಿಸಿದ್ದಾಳೆ. 45 ವರ್ಷದ ಈ ಮಹಿಳೆಗೆ ಐದು ಜನ ಮಕ್ಕಳಿದ್ದು ಮದುವೆಯಲ್ಲಿ ಮನೆಮಂದಿ ಸಂಬಂಧಿಕರೆಲ್ಲಾ ಭಾಗಿಯಾಗಿದ್ದರಂತೆ.

ಅಮಂಡಾ ತನ್ನ ಪ್ರಿಯತಮನನ್ನು ಎಂದಿಗೂ ದೈಹಿಕ ರೂಪದಲ್ಲಿ ಕಂಡಿಲ್ಲ. ಆದರೂ ಆತನ ಇರುವಿಕೆಯನ್ನು ಭ್ರಮಿಸಿಕೊಂಡು ಎಲ್ಲಾ ಜೋಡಿಗಳು ಬದುಕು ನಡೆಸುವಂತೆ ವೈವಾಹಿಕ ಜೀವನವನ್ನು ಆಕೆ ನಡೆಸುತ್ತಿದ್ದಾಳೆ.

‘ಪೈರೇಟ್ಸ್‌ ಆಫ್‌ ದ ಕೆರೆಬಿಯನ್‌’ ಸಿನಿಮಾ ಸರಣಿಯಲ್ಲಿ ಕಾಣಿಸಿಕೊಂಡ ಜಾನಿ ಡೆಪ್ಸ್‌ ಪಾತ್ರವನ್ನೇ ಹೋಲುತ್ತಾನೆ ತನ್ನ ಪತಿ ಎಂದೂ ಆಕೆ ಹೇಳಿಕೊಂಡಿದ್ದಾಳೆ. 2014ರಿಂದ ಇವರಿಬ್ಬರ ಪ್ರೇಮ ಕಥೆ ಚಾಲ್ತಿಯಲ್ಲಿದೆ.

‘ನಾನು ದೆವ್ವದ ಅಸ್ತಿತ್ವವನ್ನೇ ನಂಬಿರಲಿಲ್ಲ. ಆದರೆ ಇವನು ಪ್ರೇಮ ನಿವೇದನೆ ಮಾಡಿದಾಗ ನನಗೆ ಪ್ರೀತಿಯೂ ಹುಟ್ಟಿರಲಿಲ್ಲ. ಆದರೆ ಅವನೊಂದಿಗೆ ನಾನು ಮಾತಾಡುತ್ತಿದ್ದೆ. ಆತ ನನ್ನೊಂದಿಗೇ ಇರುತ್ತಿದ್ದ, ನಾವಿಬ್ಬರೂ ಜೊತೆಜೊತೆಯಾಗಿ ಟಿ.ವಿ. ನೋಡುತ್ತೇವೆ. ಆತನೇ ನನ್ನ ಆತ್ಮ ಸಂಗಾತಿ. ನಾನು ಈಗ ತುಂಬಾ ಖುಷಿಯಾಗಿದ್ದೇನೆ’ ಎಂದೂ ಅಮಂಡಾ ಹೇಳಿಕೊಂಡಿದ್ದಾರೆ. ಈ ಜೋಡಿ ದ್ವೀಪವೊಂದರಲ್ಲಿ ಹನಿಮೂನ್‌ ಕೂಡ ಮುಗಿಸಿಕೊಂಡು ಬಂದಿದೆಯಂತೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry