ಗೆಳತಿಯ ಮದುವೆ...

7

ಗೆಳತಿಯ ಮದುವೆ...

Published:
Updated:
ಗೆಳತಿಯ ಮದುವೆ...

ಮುದ್ದುಮುದ್ದಾಗಿರುವ ಆಲಿಯಾ ಭಟ್‌ ಎಂದರೆ ಯಾರಿಗಿಷ್ಟ ಇಲ್ಲ ಹೇಳಿ. ಚೆಲುವು, ಅಭಿನಯ, ತುಂಟಾಟ, ಪೆದ್ದಾಟ ಎಲ್ಲವೂ ಇಷ್ಟವಾಗುವಂಥದ್ದೇ. ವಯಸ್ಸು ಚಿಕ್ಕದಾದರೂ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುತ್ತಾ ಮನಸೂರೆಗೊಂಡ ಆಲಿಯಾ ಇಷ್ಟವಾಗಲು ಬಾಲಿವುಡ್‌ ಜಗತ್ತೂ ಸಾಕಷ್ಟು ಉದಾಹರಣೆ ಕೊಡುತ್ತದೆ. ಅಂಥವುಗಳಲ್ಲಿ ಗೆಳತಿಯರ ಮದುವೆಯಲ್ಲಿ ಆಲಿಯಾ ಕುಣಿದು ಕುಪ್ಪಳಿಸಿದ್ದೂ ಒಂದು.

‘ಪರ್ಫೆಕ್ಟ್‌ ಬ್ರೈಡ್ಸ್‌ಮೇಡ್‌‘ ಎಂದರೆ ಆಲಿಯಾನಂತಿರಬೇಕು ಎಂದು ಅನೇಕರು ಹೇಳುತ್ತಿದ್ದಾರೆ. ಸಿನಿಮಾ, ಪ್ರಚಾರಗಳ ನಡುವೆಯೂ ಗೆಳತಿಯರ ಮದುವೆಗೆ ತಪ್ಪದೆ ಹಾಜರಾಗುವ ಆಲಿಯಾ ಅಲ್ಲಿಯ ಎಲ್ಲಾ ಚಟುವಟಿಕೆಗಳಲ್ಲಿ ಖುಷಿಯಿಂದ ಪಾಲ್ಗೊಳ್ಳುತ್ತಾರೆ. ಇತ್ತೀಚೆಗೆ ಅವರ ಆಪ್ತ ಗೆಳತಿ ಜೋಧ್‌ಪುರದ ಕೃಪಾ ಮೆಹ್ತಾ ಮದುವೆಯಾದರು. ಅಲ್ಲಿಗೆ ಹೋಗಿದ್ದ ಆಲಿಯಾ ದಿರಿಸು, ನೃತ್ಯ, ಫೋಟೊಶೂಟ್‌ ಎಲ್ಲವೂ ಸುದ್ದಿಯಾಯಿತು. ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡು ವೈರಲ್‌ ಕೂಡ ಆಯಿತು.

ಸುಂದರವಾಗಿ ಕಾಣಿಸುವುದು, ನೃತ್ಯ ಮಾಡುವುದಷ್ಟೇ ಅಲ್ಲ ಗೆಳತಿಯ ಪ್ರತಿ ಅವಶ್ಯಕತೆಗೂ ಸ್ಪಂದಿಸುತ್ತಿದ್ದುದು ಆಲಿಯಾರೇ. ವಧುವನ್ನು ಕರೆದುಕೊಂಡು ಬರುವುದು, ಅಡ್ಡಗಟ್ಟಿ ದುಡ್ಡು ಕೇಳುವುದು, ಗೆಳತಿಯೊಂದಿಗೆ ಫೋಟೊಶೂಟ್‌ಗೆ ನಿಲ್ಲುವುದು, ಗೆಳತಿಯ ಬೇಕು ಬೇಡಗಳಿಗೆ ಸ್ಪಂದಿಸುವುದು ಎಲ್ಲ ಜವಾಬ್ದಾರಿಯನ್ನೂ ತಾವೇ ನೋಡಿಕೊಂಡರು. ಸಿನಿಮಾದಲ್ಲಿ ಭೇಷ್‌ ಎನಿಸಿಕೊಳ್ಳುವಂತೆ ವಿವಾಹ ಮಹೋತ್ಸವದಲ್ಲಿಯೂ ಮದುಮಗಳ ಅತ್ಯುತ್ತಮ ಗೆಳತಿ ಎನ್ನಿಸಿಕೊಂಡು ಬೀಗಿದರು ಆಲಿಯಾ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry