ಅಭಯ ಅಲ್ಲ ಓಲೈಕೆ

7

ಅಭಯ ಅಲ್ಲ ಓಲೈಕೆ

Published:
Updated:

ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರು ಮತ್ತಿತರರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದಾಗಿ ಅಭಯ ನೀಡಿದ ಸರ್ಕಾರದ ಕ್ರಮ ಅವಿವೇಕತನದ್ದು. ಚುನಾವಣೆ ಹೊಸ್ತಿಲಲ್ಲಿ ಇರುವಾಗ ಇದು ಕಿಡಿಗೇಡಿಗಳಿಗೆ ಸಿಕ್ಕ ‘ಬಿಡುಗಡೆ ಭಾಗ್ಯ’. ಮುಖ್ಯಮಂತ್ರಿ ಪ್ರಕಾರ ಕೋಮು ಗಲಭೆಗಳಲ್ಲಿ ಕಲ್ಲು ತೂರಿ, ಬೆಂಕಿ ಇಟ್ಟವರೆಲ್ಲ ಮುಗ್ಧರು ಮತ್ತು ಅಮಾಯಕರೇ?

ಕನ್ನಡಪರ ಹೋರಾಟಗಾರರಿಗೂ ಮುಖ್ಯಮಂತ್ರಿ ಇದೇ ಭಾಗ್ಯ ಕರುಣಿಸಿದ್ದಾರೆ. ಕನ್ನಡದ ಹೆಸರಲ್ಲಿ ಬೆಂಕಿ ಹಚ್ಚಿ, ಹಫ್ತಾ ವಸೂಲಿ ಮಾಡುವ ಪುಂಡು ಪೋಕರಿಗಳಿಗೆ ಇದರಿಂದ ಉತ್ತೇಜನ ಸಿಕ್ಕಿದಂತಾಗಿದೆ. ಒಂದು ವೇಳೆ ಬಿಜೆಪಿ ಸರ್ಕಾರ, ಹಿಂದೂ ಸಂಘಟನೆಗಳ ಕಿಡಿಗೇಡಿಗಳಿಗೆ ಬಿಡುಗಡೆ ಭಾಗ್ಯ ನೀಡಿದ್ದರೆ ಬುದ್ಧಿಜೀವಿಗಳು ಬೀದಿಗಿಳಿದು ಕೂಗಾಡುತ್ತಿದ್ದರು. ಈಗ ಬಾಯಿಗೆ ಬೀಗ ಹಾಕಿಕೊಂಡು ಕುಳಿತ್ತಿದ್ದಾರೆ. ಇದು ಅಲ್ಪಸಂಖ್ಯಾತರಿಗೆ ಅಭಯ ಅಲ್ಲ, ಅವರ ಓಲೈಕೆ ಎಂಬುದು ಪ್ರಾಥಮಿಕ ಶಾಲೆಯ ಮಕ್ಕಳಿಗೂ ಗೊತ್ತಾಗುತ್ತದೆ.

ಕೆ.ಮೋಹನ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry