ಮಹಿಳೆಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ: ನರೇಂದ್ರ ಮೋದಿ

7

ಮಹಿಳೆಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ: ನರೇಂದ್ರ ಮೋದಿ

Published:
Updated:
ಮಹಿಳೆಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ: ನರೇಂದ್ರ ಮೋದಿ

ನವದೆಹಲಿ: ಮಹಿಳೆಯರು ಎಲ್ಲ ಕ್ಷೇತ್ರದಲ್ಲಿಯೂ ಪ್ರಗತಿ ಸಾಧಿಸುತ್ತಿದ್ದಾರೆ. ಮಹಿಳೆಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ ಎಂದು ಪ್ರಧಾನಿ ನರೇಂದ್ರ ಮೋದಿ ಮನದ ಮಾತು ಕಾರ್ಯಕ್ರಮದಲ್ಲಿ ಹೇಳಿದ್ದಾರೆ. 

ಈ ವರ್ಷದ ಮೊದಲ ಮನದ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಭಾರತದ ಮೊದಲ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರನ್ನು ಸ್ಮರಿಸಿದ್ದಾರೆ. ಕಲ್ಪನಾ ಚಾವ್ಲಾ ಅವರು ಎಲ್ಲ ಭಾರತೀಯರಿಗೆ ವಿಶೇಷವಾಗಿ ಯುವ ಜನಾಂಗಕ್ಕೆ ಅವರು ಉತ್ತಮ ಸಂದೇಶವನ್ನೇ ನೀಡಿ ಹೋಗಿದ್ದಾರೆ ಎಂದಿದ್ದಾರೆ.

ಫೆಬ್ರುವರಿ 1ರಂದು ಕಲ್ಪನಾ ಪುಣ್ಯತಿಥಿ. ಮಹಿಳೆಯೊಬ್ಬಳಿಗೆ ಗಟ್ಟಿ ನಿರ್ಧಾರವಿದ್ದರೆ, ಅಸಾಧ್ಯವಾದುದು ಏನೂ ಇಲ್ಲ ಎಂಬುದು ಕಲ್ಪನಾ ನೀಡಿದ ಸಂದೇಶ ಎಂದಿದ್ದಾರೆ ಮೋದಿ.

ವೇದಗಳನ್ನು ಕೂಡಾ ಮಹಿಳೆಯರೇ ಸಂಯೋಜಿಸಿರುವಾಗ ನಾರಿ ಶಕ್ತಿ ಹಲವು ಮೈಲಿಗಲ್ಲನ್ನು ಸ್ಥಾಪಿಸಿದೆ ಮತ್ತು ಮಹತ್ವದ ಸಾಧನೆಗಳನ್ನು ಮಾಡಿದೆ. ನಿಮ್ಮಲ್ಲಿ ಒಂದು ಮಾತನ್ನು ಹೇಳಲು ನಾನು ಬಯಸುತ್ತೇನೆ. ಒಬ್ಬಳು ಮಗಳು 10 ಮಗನಿಗೆ ಸಮಾನ. 10 ಮಗನಿಂದ ಸಿಗುವ ಪುಣ್ಯ ಒಬ್ಬ ಮಗಳಿಂದ ಸಿಗುತ್ತದೆ.

ಶೀಘ್ರದಲ್ಲೇ ಸೂಪರ್‍‍ಸಾನಿಕ್ ಫೈಟರ್ ಜೆಟ್‍ನ್ನು ಹಾರಿಸುವ ಮೂಲಕ ಚಾರಿತ್ರಿಕ ದಾಖಲೆ ಸೃಷ್ಟಿಸಲು ಸಜ್ಜಾಗಿರುವ ಭಾರತ ವಾಯುಸೇನೆಯ ಮೂವರು ಮಹಿಳಾ ಪೈಲೆಟ್‍ಗಳ ಉದಾಹರಣೆ ನೀಡಿದ್ದಾರೆ.

ಬಿಹಾರದಲ್ಲಿನ ಒಂದು ಸಂಗತಿಯನ್ನು ನಾನಿಲ್ಲಿ ಹೇಳಬಯಸುತ್ತೇನೆ. ವರದಕ್ಷಿಣೆ ಮತ್ತು ಬಾಲ್ಯ ವಿವಾಹದ ಪಿಡುಗಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಲ್ಲಿ ಮಾನವ ಸರಪಳಿ ಏರ್ಪಡಿಸಲಾಗಿತ್ತು. ಹಲವಾರು ಮಂದಿ ಇದರಲ್ಲಿ ಭಾಗಿಯಾಗಿದ್ದರು.

ಅದೇ  ವೇಳೆ ಪದ್ಮ ಪ್ರಶಸ್ತಿ ಬಗ್ಗೆ ಮಾತನಾಡಿದ ಮೋದಿ, ಜನರ ಹೆಸರು ನೋಡಿ ಯಾರಿಗೂ ಪ್ರಶಸ್ತಿ ನೀಡುವುದಿಲ್ಲ. ಅವರ ಕೆಲಸಗಳನ್ನು ನೋಡಿ ಪ್ರಶಸ್ತಿ ನೀಡಲಾಗುತ್ತಿದೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry