ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ಗದ ಜೀವನ; ಭಾರತಕ್ಕೆ 2ನೇ ಸ್ಥಾನ

ಗೋಬ್ಯಾಂಕಿಂಗ್‌ರೇಟ್ಸ್ ಸಮೀಕ್ಷೆ
Last Updated 28 ಜನವರಿ 2018, 19:30 IST
ಅಕ್ಷರ ಗಾತ್ರ

ಅತ್ಯಂತ ಕಡಿಮೆ ಖರ್ಚಿನಲ್ಲಿ ಜೀವನ ನಡೆಸಲು ಸಾಧ್ಯವಿರುವ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಈ ಪಟ್ಟಿಯ ಮೊದಲ ಸ್ಥಾನದಲ್ಲಿದೆ ಎಂದು ಜಾಗತಿಕ ಸಮೀಕ್ಷೆಯೊಂದು ಹೇಳಿದೆ. ‘ಅಮೆರಿಕನ್ನರು, ಅದರಲ್ಲೂ ನ್ಯೂಯಾರ್ಕ್ ನಿವಾಸಿಗಳು ಕಡಿಮೆ ಖರ್ಚಿನಲ್ಲಿ ಮತ್ತು ಹೆಚ್ಚು ಸುರಕ್ಷಿತವಾಗಿ ತಮ್ಮ ನಿವೃತ್ತಿ ಜೀವನವನ್ನು ಎಲ್ಲಿ ಕಳೆಯಬಹುದು ಎಂಬುದನ್ನು ತಿಳಿಸುವುದು ಈ ಸಮೀಕ್ಷೆಯ ಮುಖ್ಯ ಉದ್ದೇಶ’ ಎಂದು ಗೋಬ್ಯಾಂಕಿಂಗ್‌ರೇಟ್ಸ್ ಹೇಳಿದೆ.

ಭಾರತದ ಬಗ್ಗೆ ಸಮೀಕ್ಷೆ ಹೇಳಿದ್ದು

* ವಿಶ್ವದ ಅತ್ಯಂತ ಕಡಿಮೆ ವೆಚ್ಚದ 50 ದೇಶಗಳಲ್ಲಿ ಭಾರತವೇ ಹೆಚ್ಚು ಜನಪ್ರಿಯ

* ಜವಳಿ–ಸಿದ್ಧ ಉಡುಪು ಉದ್ಯಮ, ರಾಸಾಯನಿಕ ಕೈಗಾರಿಕೆಗಳು ಮತ್ತು ಆಹಾರ ಸಂಸ್ಕರಣ ಉದ್ಯಮಗಳು ಹೆಚ್ಚು. ಇವು ಜನರ ಖರೀದಿ ಸಾಮರ್ಥ್ಯ ಹೆಚ್ಚಿಸಿವೆ

* ಸಮೀಕ್ಷೆಗೆ ಒಳಪಡಿಸಿದ ಎಲ್ಲಾ ದೇಶಗಳ ನಗರಗಳ ಹೋಲಿಕೆಯಲ್ಲಿ ಭಾರತದ ನಗರಗಳಲ್ಲೇ ಸ್ಥಳೀಯ ಖರೀದಿ ಸಾಮರ್ಥ್ಯ ಹೆಚ್ಚು


ನ್ಯೂಯಾರ್ಕ್‌ ನಗರದಲ್ಲಿ ವ್ಯಕ್ತಿಯೊಬ್ಬ ಜೀವನ ನಡೆಸಲು ಮಾಡಬೇಕಾದ ವೆಚ್ಚವನ್ನು ಆಧಾರವಾಗಿಟ್ಟುಕೊಂಡು ಸಮೀಕ್ಷೆ ನಡೆಸಲಾಗಿದೆ. ರ‍್ಯಾಂಕ್ ನೀಡಲು ಬಳಸಿದ ಮಾನದಂಡಗಳು ಈ ಮುಂದಿನಂತಿವೆ.

* ಸ್ಥಳೀಯರ ಖರೀದಿ ಸಾಮರ್ಥ್ಯ ಸೂಚ್ಯಂಕ: ಯಾವುದೇ ದೇಶದಲ್ಲಿ ಖರೀದಿ ಸಾಮರ್ಥ್ಯ ಅಧಿಕವಾಗಿದ್ದರೆ ಗ್ರಾಹಕ ಸರಕುಗಳ ಖರೀದಿ ಪ್ರಮಾಣ ಅಧಿಕವಾಗಿರುತ್ತದೆ. ಖರೀದಿ ಸಾಮರ್ಥ್ಯ ಹೆಚ್ಚಾಗಿರುವುದು, ಆ ದೇಶದಲ್ಲಿ ವೆಚ್ಚದ ಪ್ರಮಾಣ ಕಡಿಮೆ ಎಂಬುದನ್ನು ಸೂಚಿಸುತ್ತದೆ

* ಬಾಡಿಗೆ ಸೂಚ್ಯಂಕ: ಇದು ಸರಾಸರಿ ಮನೆ ಬಾಡಿಗೆ. ಇದು ಕಡಿಮೆ ಇದ್ದಷ್ಟೂ ಜೀವನ ನಿರ್ವಹಣೆ ವೆಚ್ಚ ಕಡಿಮೆಯಾಗಿರುತ್ತದೆ.

* ದಿನಸಿ ಸೂಚ್ಯಂಕ: ದಿನಸಿಗಳ ಬೆಲೆ ಕಡಿಮೆಯಾದಷ್ಟೂ ಜೀವನ ನಿರ್ವಹಣೆ ವೆಚ್ಚ ಕಡಿಮೆಯಾಗುತ್ತದೆ.

* ಗ್ರಾಹಕ ಸರಕುಗಳು ಮತ್ತು ಸೇವೆಗಳ ಬೆಲೆ: ಸರಕು ಮತ್ತು ಸೇವೆಗಳ ಬೆಲೆ, ಶುಲ್ಕ ಕಡಿಮೆ ಇದ್ದಷ್ಟೂ ಜೀವನ ನಿರ್ವಹಣೆ ವೆಚ್ಚ ಕಡಿಮೆಯಾಗಿರುತ್ತದೆ.
***
14 ಪಾಕಿಸ್ತಾನದ ರ‍್ಯಾಂಕ್
28 ನೇಪಾಳದ ರ‍್ಯಾಂಕ್
40 ಬಾಂಗ್ಲಾದೇಶದ ರ‍್ಯಾಂಕ್

**
ಆಧಾರ: ಪಿಟಿಐ, ಗೋಬ್ಯಾಂಕಿಂಗ್‌ರೇಟ್ಸ್ ಸಮೀಕ್ಷೆ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT