ಬಿರುಗಾಳಿಗೆ ಕಾರಣವಾಗುವ ಸಣ್ಣ ಕಣಗಳು!

7

ಬಿರುಗಾಳಿಗೆ ಕಾರಣವಾಗುವ ಸಣ್ಣ ಕಣಗಳು!

Published:
Updated:
ಬಿರುಗಾಳಿಗೆ ಕಾರಣವಾಗುವ ಸಣ್ಣ ಕಣಗಳು!

ನ್ಯೂಯಾರ್ಕ್: ಗಾಳಿಯಲ್ಲಿ ಸಂಚರಿಸುವ ಸಣ್ಣ ಕಣಗಳು ಬೃಹತ್ ಚಂಡಮಾರುತಗಳ ಮೇಲೆ ಪ್ರಭಾವ ಬೀರಬಲ್ಲವು ಎಂದು ವಿಜ್ಞಾನಿಗಳು ಹೇಳಿದ್ದಾರೆ. ವಿಜ್ಞಾನಿಗಳು ಈ ಹಿಂದೆ ಊಹಿಸಿದ್ದಕ್ಕಿಂತ ಇವುಗಳ ಪ್ರಭಾವ ದೊಡ್ಡದು ಎಂದು 'ಸೈನ್ಸ್ ‍ಪತ್ರಿಕೆ'ಯಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ಅಭಿಪ್ರಾಯಪಟ್ಟಿದೆ.

ನಗರ ಮತ್ತು ಕೈಗಾರಿಕೆಗಳಿಂದ ಉಂಟಾಗುವ ವಾಯುಮಾಲಿನ್ಯ, ಕಾಳ್ಗಿಚ್ಚು ಮತ್ತು ಇತರೆ ಕಾರಣಗಳಿಂದ ಉಂಟಾಗುವ ಹೊಗೆಯಲ್ಲಿರುವ ಕಣಗಳು ಉಂಟು ಮಾಡುವ ಪರಿಣಾಮವನ್ನು ಇಲ್ಲಿ ವಿವರಿಸಲಾಗಿದೆ.

ಹವಾಮಾನ ಮತ್ತು ವಾಯುಗುಣವನ್ನು ನಿರ್ಧರಿಸುವಲ್ಲಿಯೂ ಇವು ಪ್ರಮುಖ ಪಾತ್ರ ವಹಿಸುತ್ತವೆ ಎಂದಿರುವ ವಿಜ್ಞಾನಿಗಳು, ಈ ಅತಿಸಣ್ಣ ಕಣಗಳು ಆಗಾಧ ಪ್ರಭಾವಶಾಲಿಗಳೂ ಆಗಿವೆ ಎಂದಿದ್ದಾರೆ.

ಮನುಷ್ಯನ ಕೂದಲಿನ ಸಾವಿರದಲ್ಲಿ ಒಂದು ಭಾಗದಷ್ಟು ಮಾತ್ರ ಗಾತ್ರ ಹೊಂದಿರುವ ಇವು ಬಿರುಗಾಳಿ ಉಂಟಾಗುವಿಕೆ ಮೇಲೆ ತೀಕ್ಷ್ಣ ಪ್ರಭಾವ ಬೀರುತ್ತವೆ. ಅಲ್ಲದೆ ಮೋಡಗಳ ಗಾತ್ರ ಹೆಚ್ಚಳ, ಮಳೆಯ ಪ್ರಮಾಣ ಏರಿಕೆಗೂ ಕಾರಣವಾಗುತ್ತವೆ.

‘ಅಮೆಜಾನ್‌ನಂತಹ ಮಳೆಕಾಡುಗಳಲ್ಲಿ ಅತಿಸೂಕ್ಷ್ಮ ಏರೊಸಾಲ್‌ಗಳ ಪ್ರಭಾವವು ಅಚ್ಚರಿಯೆಂಬಂತೆ ಬೇರೆಯಾಗಿತ್ತು’ ಎಂದು ಅಮೆರಿಕದ ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಝಾಂಗ್‌ಕ್ವಿಂಗ್‌ ಲಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry