ಮುಂಬೈ ಷೇರುಪೇಟೆ ಇಂದಿನಿಂದ ಅಣಕು ವಹಿವಾಟು

7

ಮುಂಬೈ ಷೇರುಪೇಟೆ ಇಂದಿನಿಂದ ಅಣಕು ವಹಿವಾಟು

Published:
Updated:
ಮುಂಬೈ ಷೇರುಪೇಟೆ ಇಂದಿನಿಂದ ಅಣಕು ವಹಿವಾಟು

ನವದೆಹಲಿ: ಮುಂಬೈ ಷೇರು ವಿನಿಮಯ ಕೇಂದ್ರವು ಸೋಮವಾರದಿಂದ ಪದಾರ್ಥಗಳ ವಾಯಿದಾ ವಹಿವಾಟಿನ ಅಣಕು ವಹಿವಾಟನ್ನು ಆರಂಭಿಸಲಿದೆ.

ಪದಾರ್ಥಗಳ ವಾಯಿದಾ ವಹಿವಾಟು ವಿಭಾಗದಲ್ಲಿ ಸೋಮವಾರ ಬೆಳಿಗ್ಗೆ 10.30 ರಿಂದ ಸಂಜೆ 7.10ರವರೆಗೆ ಅಣಕು ವಹಿವಾಟು ನಡೆಯಲಿದೆ.

ಷೇರು ವಿನಿಮಯ ಕೇಂದ್ರಗಳಿಗೆ ಪದಾರ್ಥಗಳ ವಾಯಿದಾ ವಹಿವಾಟಿಗೆ ಅವಕಾಶ ಕಲ್ಪಿಸಲು ಅಗತ್ಯವಾದ ಏಕರೂಪದ ವಿನಿಮಯ ವ್ಯವಸ್ಥೆ ನೀಡುವುದಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಡಿಸೆಂಬರ್‌ನಲ್ಲಿ ಹೇಳಿತ್ತು. ಅದರಂತೆ ಬಿಎಸ್‌ಇ ಪದಾರ್ಥಗಳ ವಾಯಿದಾ ವಹಿವಾಟು ನಡೆಸಲು ಸಜ್ಜಾಗಿದೆ.

ಸದ್ಯಕ್ಕೆ, ಷೇರುಗಳು ಮತ್ತು ಕರೆನ್ಸಿಗಳ ವಹಿವಾಟಿಗೆ ಮಾತ್ರವೇ ಅವಕಾಶ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry