ಮಹಾಮಸ್ತಕಾಭಿಷೇಕ; ಅನಿವಾಸಿ ಭಾರತೀಯರಿಗೆ ಅವಕಾಶ

7

ಮಹಾಮಸ್ತಕಾಭಿಷೇಕ; ಅನಿವಾಸಿ ಭಾರತೀಯರಿಗೆ ಅವಕಾಶ

Published:
Updated:
ಮಹಾಮಸ್ತಕಾಭಿಷೇಕ; ಅನಿವಾಸಿ ಭಾರತೀಯರಿಗೆ ಅವಕಾಶ

ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕದಲ್ಲಿ ಅನಿವಾಸಿ ಭಾರತೀಯರಿಗೆ ಫೆ.21 ಮತ್ತು 22ರಂದು ಅಭಿಷೇಕ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ ಹೇಳಿದರು.

ಇಲ್ಲಿನ ತಾತ್ಕಾಲಿಕ ಉಪನಗರಗಳಿಗೆ ಭೇಟಿ ನೀಡಿದ ಬಳಿಕ ‘ಪ್ರಜಾವಾಣಿ’ ಜತೆ ಅವರು ಮಾತನಾಡಿದರು. ಈಗಾಗಲೇ ಜೈನ ಧರ್ಮದ 200 ಅನಿವಾಸಿ ಭಾರತೀಯರು ತಮ್ಮ ಹೆಸರನ್ನು ಎನ್‌ಆರ್‌ಐ ಗ್ರೂಪಿಗೆ ನೋಂದಾಯಿಸಿಕೊಂಡಿದ್ದಾರೆ. ಜರ್ಮನ್‌, ಕೀನ್ಯಾ, ದುಬೈ, ಬ್ರೆಜಿಲ್‌, ಇಂಗ್ಲೆಂಡ್, ಇಂಡೋನೇಶಿಯಾ ಮೊದಲಾದ ದೇಶಗಳಿಂದ ಇಲ್ಲಿಗೆ ಆಗಮಿಸುತ್ತಿದ್ದಾರೆ. ರಾಜ್ಯದಲ್ಲಿರುವ ಪ್ರಾಚೀನ ಜಿನ ಬಸದಿ, ಕ್ಷೇತ್ರದಲ್ಲಿ ಪ್ರಾಕೃತ ಭಾಷೆಯ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಅನಿವಾಸಿಯರಿಂದ ‘ನಮ್ಮ ಊರು, ನಮ್ಮ ನಾಡು’ ಎಂಬ ಯೋಜನೆಯಲ್ಲಿ ಕೊಡುಗೆ ನಿರೀಕ್ಷಿಸಲಾಗಿದ್ದು, ಅವುಗಳಿಗೆ ವಿದೇಶಾಂಗ ಇಲಾಖೆ ಮೂಲಕ ರಿಯಾಯಿತಿ ಕೊಡಿಸಲಾಗುವುದು ಎಂದು ತಿಳಿಸಿದರು.

ಅನಿವಾಸಿ ಭಾರತೀಯರನ್ನು 2008ರಿಂದಲೂ ಆಮಂತ್ರಿಸಲಾಗುತ್ತಿದೆ. ಎನ್‌ಆರ್‌ಐಗಳಿಗೆ ಪೊಲೀಸ್‌ ಉಪನಗರದ ಪಕ್ಕದ ಜಾಗದ ಬಳಿ ಹವಾನಿಯಂತ್ರಿತ ವಿಶ್ರಾಂತಿ ಕೊಠಡಿ ನಿರ್ಮಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ವಿನಂತಿಸಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry