ಅತ್ಯಾಚಾರ: ಟಿ.ವಿ. ವರದಿಗಾರನ ವಿರುದ್ಧ ದೂರು

7

ಅತ್ಯಾಚಾರ: ಟಿ.ವಿ. ವರದಿಗಾರನ ವಿರುದ್ಧ ದೂರು

Published:
Updated:

ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಟಿ.ವಿ 9 ವರದಿಗಾರ ರಾಮ್‌ (35) ಎಂಬಾತನ ವಿರುದ್ಧ ಉದಯಗಿರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಅತ್ಯಾಚಾರ (ಐಪಿಸಿ 376), ಲೈಂಗಿಕ ದೌರ್ಜನ್ಯ (354), ವಂಚನೆ (420) ಹಾಗೂ ಮೊದಲ ಮದುವೆಯನ್ನು ಮುಚ್ಚಿಟ್ಟಿರುವ (496) ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ತಲೆಮರೆಸಿ ಕೊಂಡಿರುವ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ವಿಚ್ಛೇದಿತ ಮಹಿಳೆಗೆ ಪರಿಚಿತನಾಗಿದ್ದ ಆರೋಪಿ ತಾನೊಬ್ಬ ಅವಿವಾಹಿತ ಎಂದು ನಂಬಿಸಿ, ಹಲವು ಬಾರಿ ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry