ಪತ್ರಕರ್ತರ ವಿರುದ್ಧ ದೇವೇಗೌಡ ಕಿಡಿ

7

ಪತ್ರಕರ್ತರ ವಿರುದ್ಧ ದೇವೇಗೌಡ ಕಿಡಿ

Published:
Updated:

ಮೈಸೂರು: ಪಶುಸಂಗೋಪನೆ ಸಚಿವ ಎ.ಮಂಜು ಮಾಡಿರುವ ಟೀಕೆಗೆ ಪ್ರತಿಕ್ರಿಯೆ ಬಯಸಿದ ಪತ್ರಕರ್ತರ ವಿರುದ್ಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಇಲ್ಲಿ ಭಾನುವಾರ ಹರಿಹಾಯ್ದರು.‌

‘ಮಂಜು ಕುರಿತು ಪ್ರಶ್ನೆ ಕೇಳುವ ಬದಲು ಪಾಯಖಾನೆ ಮೇಲೆ ಕಲ್ಲು ಹಾಕಿ ಮೈಮೇಲೆ ಹಾರಿಸಿಕೊಳ್ಳಿ’ ಎಂದು ಕಿಡಿಕಾರಿದರು.

ಸೆನೆಟ್ ಭವನದಲ್ಲಿ ಭಾನುವಾರ ನಡೆದ ಸೆನೆಟ್ ಮಾಜಿ ಸದಸ್ಯ ಎನ್.ಜಯರಾಮು ಕೀಲಾರ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಭಾಗಿಯಾದರು.

‘ಸಚಿವರೊಬ್ಬರು ನನ್ನ ಕುರಿತು ಆಡಿರುವ ಹಗುರ ಮಾತುಗಳಿಗೆ ಮಾಧ್ಯಮ ಪ್ರತಿನಿಧಿಗಳು ಹೊರಗಡೆ ಪ್ರತಿಕ್ರಿಯೆ ಬಯಸಿದರು. ನಾನು ನಿರಾಕರಿಸಿದೆ. ನಂತರ ವಾಪಸ್ ತೆರಳಿದರು. ಆದರೆ, ಇಲ್ಲಿ ನಡೆಯುತ್ತಿರುವ ಮಹತ್ವದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲಿಲ್ಲ. ಇನ್ನು ಮುಂದಾದರೂ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ತಾಳ್ಮೆಯನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry