ಪಿಎಫ್‌ಐ ಷರತ್ತಿಗೆ ಮಣಿದ ಕಾಂಗ್ರೆಸ್ ಸರ್ಕಾರ: ಶೋಭಾ ಕರಂದ್ಲಾಜೆ

7

ಪಿಎಫ್‌ಐ ಷರತ್ತಿಗೆ ಮಣಿದ ಕಾಂಗ್ರೆಸ್ ಸರ್ಕಾರ: ಶೋಭಾ ಕರಂದ್ಲಾಜೆ

Published:
Updated:

ಬೆಂಗಳೂರು: ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ) ಷರತ್ತಿಗೆ ಮಣಿದ ಕಾಂಗ್ರೆಸ್‌ ಸರ್ಕಾರ, ಅಲ್ಪಸಂಖ್ಯಾತರ ವಿರುದ್ಧದ ಮೊಕದ್ದಮೆಗಳನ್ನು ಹಿಂಪಡೆಯಲು ಮುಂದಾಗಿತ್ತು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಪಿಎಫ್ಐನ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆ ಮುಂದಿನ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಕಾಂಗ್ರೆಸ್‌ ಮುಂದಾಗಿದೆ. ಈ ಹೊಂದಾಣಿಕೆ ಸಾಧ್ಯವಾಗಬೇಕಾದರೆ ತಮ್ಮ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು ಎಂದು ಪಿಎಫ್‌ಐ ಷರತ್ತು ಹಾಕಿದೆ ಎಂದೂ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ವಿರುದ್ಧದ ಮೊಕದ್ದಮೆಗಳನ್ನು ವಾಪಸ್ ಪಡೆಯುವ ಸರ್ಕಾರದ ಕ್ರಮಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತು. ಇದರಿಂದ ಕಂಗಾಲಾದ ಸರ್ಕಾರ, ‘ಅಮಾಯಕ ಮುಸ್ಲಿಮರ ವಿರುದ್ಧದ ಪ್ರಕರಣಗಳು’ ಎಂಬ ಶಬ್ದಗಳ ಬದಲಿಗೆ ‘ಎಲ್ಲ ಅಮಾಯಕರ ವಿರುದ್ಧದ ಪ್ರಕರಣಗಳು’ ಎಂಬುದಾಗಿ ಸುತ್ತೋಲೆಯನ್ನು ಬದಲಾಯಿಸಿದೆ ಎಂದು ಅವರು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry