ಪಕ್ಷ ಸ್ಥಾಪನೆ, ಕಾಪು ಕ್ಷೇತ್ರದಿಂದ ಸ್ಪರ್ಧೆ ಖಚಿತ: ಅನುಪಮಾ ಶಣೈ

7

ಪಕ್ಷ ಸ್ಥಾಪನೆ, ಕಾಪು ಕ್ಷೇತ್ರದಿಂದ ಸ್ಪರ್ಧೆ ಖಚಿತ: ಅನುಪಮಾ ಶಣೈ

Published:
Updated:
ಪಕ್ಷ ಸ್ಥಾಪನೆ, ಕಾಪು ಕ್ಷೇತ್ರದಿಂದ ಸ್ಪರ್ಧೆ ಖಚಿತ: ಅನುಪಮಾ ಶಣೈ

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ನೇತೃತ್ವದ ಹೊಸಪಕ್ಷದ ಅಡಿಯಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆ ಕಾಪು ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತ ಎಂದು ಮಾಜಿ ಪೊಲೀಸ್‌ ಅಧಿಕಾರಿ ಅನುಪಮಾ ಶಣೈ ಹೇಳಿದರು.

ತಾಲ್ಲೂಕಿನ ಹಾನಗಲ್‌ನಲ್ಲಿ ಭಾನುವಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅವರು ‘ಪ್ರಜಾವಾಣಿ ‘ ಜತೆ ಮಾತನಾಡಿದರು.

‘ಭಾರತೀಯ ಜನಶಕ್ತಿ’ ಎಂಬ ಹೆಸರಿನ ಪಕ್ಷ ನೋಂದಣಿ ಮಾಡಿಸಿದ್ದು, ಫೆಬ್ರುವರಿ ಅಂತ್ಯಕ್ಕೆ ಅನುಮತಿ, ಚಿಹ್ನೆ ದೊರೆಯಲಿದೆ. ಪಕ್ಷವನ್ನು ಈ ಚುನಾವಣೆಗಷ್ಟೇ ಮೀಸಲಾಗಿಡದೇ ಭವಿಷ್ಯದ ದೃಷ್ಟಿಯಿಂದ ಸ್ಥಾಪಿಸಲಾಗಿದೆ. ಈಗಾಗಲೇ ಹಲವರು ಪಕ್ಷಕ್ಕೆ ಬರುವ ಹಾಗೂ ಸ್ಪರ್ಧೆ ಮಾಡುವ ಬಗ್ಗೆ ಸಂಪರ್ಕಿಸಿದ್ದಾರೆ. ಚಿಹ್ನೆ ಬಂದ ನಂತರ ಮುಂದುವರಿಯಲಾಗುವುದು ಎಂದರು.

‘ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮೂರೂ ಪಕ್ಷಗಳಿಂದ ಅಂತರ ಕಾಯ್ದುಕೊಳ್ಳಲಾಗುವುದು. 16 ಅಂಶಗಳನ್ನು ಮುಂದಿಟ್ಟುಕೊಂಡು ನಮ್ಮ ಪಕ್ಷ ಚುನಾವಣೆ ಎದುರಿಸಲಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry