‘ಅಧಿಕಾರದ ಹುಚ್ಚು ನನಗಿಲ್ಲ’

7

‘ಅಧಿಕಾರದ ಹುಚ್ಚು ನನಗಿಲ್ಲ’

Published:
Updated:
‘ಅಧಿಕಾರದ ಹುಚ್ಚು ನನಗಿಲ್ಲ’

ಸಂಡೂರು: ‘ಸ್ಥಳೀಯರ ಅಭಿಲಾಷೆಯ ಮೇರೆಗೆ ಇದೇ 31ರ ನಂತರ ನವದೆಹಲಿಯಲ್ಲಿ ಬಿಜೆಪಿ ಸೇರುತ್ತಿದ್ದೇನೆ. ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಅಧಿಕಾರದ ಹುಚ್ಚು ನನಗಿಲ್ಲ’ ಎಂದು ಮಾಜಿ ಸಚಿವ ಎಂ.ವೈ. ಘೋರ್ಪಡೆ ಅವರ ಕಿರಿಯ ಮಗ ಕಾರ್ತಿಕೇಯ ತಿಳಿಸಿದರು.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನನ್ನ ಊರು, ನನ್ನ ಜನ ಬಿಟ್ಟು ಬೇರೆ ಎಲ್ಲಿಗೂ ಹೋಗಲ್ಲ. ಬಿಜೆಪಿಯಲ್ಲಿ ನಮ್ಮವರು ಅನೇಕ ಜನ ಇದ್ದಾರೆ. ನಾನು ಪಕ್ಷ ಸೇರಬೇಕು. ಸಂಡೂರು ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದರು. ಹಾಗಾಗಿ ಪಕ್ಷ ಸೇರುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry