ನ್ಯೂಪೋರ್ಟ್‌ ಬೀಚ್‌ ಚಾಲೆಂಜರ್‌ ಟೆನಿಸ್‌ ಟೂರ್ನಿ : ಪೇಸ್‌–ಸೆರೆಟಾನಿಗೆ ಡಬಲ್ಸ್‌ ಗರಿ

7

ನ್ಯೂಪೋರ್ಟ್‌ ಬೀಚ್‌ ಚಾಲೆಂಜರ್‌ ಟೆನಿಸ್‌ ಟೂರ್ನಿ : ಪೇಸ್‌–ಸೆರೆಟಾನಿಗೆ ಡಬಲ್ಸ್‌ ಗರಿ

Published:
Updated:
ನ್ಯೂಪೋರ್ಟ್‌ ಬೀಚ್‌ ಚಾಲೆಂಜರ್‌ ಟೆನಿಸ್‌ ಟೂರ್ನಿ : ಪೇಸ್‌–ಸೆರೆಟಾನಿಗೆ ಡಬಲ್ಸ್‌ ಗರಿ

ನವದೆಹಲಿ: ಭಾರತದ ಲಿಯಾಂಡರ್‌ ಪೇಸ್‌ ಮತ್ತು ಅಮೆ ರಿಕದ ಜೇಮ್ಸ್‌ ಸೆರೆಟಾನಿ, ನ್ಯೂಪೋರ್ಟ್‌ ಬೀಚ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ಡಬಲ್ಸ್‌ ಪ್ರಶಸ್ತಿ ಗೆದ್ದಿದ್ದಾರೆ.

ಭಾನುವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ ಹೋರಾಟ ದಲ್ಲಿ ಪೇಸ್‌ ಮತ್ತು ಸೆರೆಟಾನಿ 6–4, 7–5ರಲ್ಲಿ ಅಮೆರಿಕದ ಡೆನಿಸ್‌ ಕುಡ್ಲಾ ಮತ್ತು ಟ್ರೀಟ್‌ ಹ್ಯುಯೆ ಅವರನ್ನು ಮಣಿಸಿ ದರು. ಅನುಭವಿ ಆಟಗಾರ ಪೇಸ್, ವೃತ್ತಿ ಬದುಕಿನಲ್ಲಿ ಗೆದ್ದ 25ನೇ ಡಬಲ್ಸ್‌ ಚಾಲೆಂಜರ್‌ ಪ್ರಶಸ್ತಿ ಇದಾಗಿದೆ.

ಎರಡನೇ ಶ್ರೇಯಾಂಕದ ಪೇಸ್‌ ಮತ್ತು ಸೆರೆಟಾನಿ ಮೊದಲ ಸೆಟ್‌ನಲ್ಲಿ ಮಿಂಚಿದರು. ಚುರುಕಿನ ಸರ್ವ್‌ಗಳನ್ನು ಮಾಡಿದರು. ಎದುರಾಳಿಗಳ ಸರ್ವ್ ಗಳಿಗೂ ನಿಖರ ರಿಟರ್ನ್ ನೀಡಿದರು. ಇದರಿಂದಾಗಿ ಮೊದಲ ಸೆಟ್ ಜಯ ಸುಲಭವಾಯಿತು.

ಎರಡನೇ ಸೆಟ್‌ನಲ್ಲಿ ಡೆನಿಸ್‌ ಮತ್ತು ಟ್ರೀಟ್‌ ಮಿಂಚಿನ ಆಟವಾಡಿದರು. ಪೇಸ್‌ ಮತ್ತು ಸೆರೆಟಾನಿ ಜೋಡಿಗೆ ಪ್ರಬಲ ಪೈಪೋಟಿ ಒಡ್ಡಿದ ಈ ಜೋಡಿ 5–5ರಲ್ಲಿ ಸಮಬಲ ಮಾಡಿಕೊಂಡಿತ್ತು. ಈ ಹಂತದಲ್ಲಿ ಉತ್ತಮ ಆಟವಾಡಿದ ಪೇಸ್ ಜೋಡಿಯು ನಂತರದ ಎರಡೂ ಗೇಮ್‌ಗಳನ್ನು ಗೆದ್ದಿತು.

ಇಲ್ಲಿ ಪ್ರಶಸ್ತಿ ಗೆದ್ದು 125 ರ‍್ಯಾಂಕಿಂಗ್‌ ಪಾಯಿಂಟ್ಸ್‌ ಕಲೆಹಾಕಿರುವ ಪೇಸ್‌, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರ 50ರೊಳಗೆ ಸ್ಥಾನ ಗಳಿಸುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry