ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿ: ಸೈನಾಗೆ ತಪ್ಪಿದ ಪ್ರಶಸ್ತಿ

7

ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿ: ಸೈನಾಗೆ ತಪ್ಪಿದ ಪ್ರಶಸ್ತಿ

Published:
Updated:
ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿ: ಸೈನಾಗೆ ತಪ್ಪಿದ ಪ್ರಶಸ್ತಿ

ಜಕಾರ್ತ : ಭಾರತದ ಸೈನಾ ನೆಹ್ವಾಲ್‌ ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಭಾನುವಾರ ಸೋತಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಸೈನಾ 9–21, 13–21ರಲ್ಲಿ ನೇರ ಗೇಮ್‌ಗಳಿಂದ ಬಿಡಬ್ಲ್ಯುಎಫ್‌ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ತೈವಾನ್‌ನ ಆಟಗಾರ್ತಿ ತೈ ಜು ಯಿಂಗ್ ಎದುರು ಸೋತರು.

ಸೈನಾ ಹಾಗೂ ತೈ ಜು ಯಿಂಗ್ ಅವರ ಈ ಹಿಂದಿನ ಹತ್ತು ಪಂದ್ಯಗಳ ಮುಖಾಮುಖಿಯಲ್ಲಿ ಭಾರತದ ಆಟಗಾರ್ತಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದ್ದಾರೆ. 2013ರ ಸ್ವಿಸ್‌ ಓಪನ್‌ನಲ್ಲಿ ಸೈನಾ ಗೆದ್ದಿದ್ದರು.

ತೈ ಜು ಯಿಂಗ್‌ ಆರಂಭದಲ್ಲಿಯೇ ಶರವೇಗದಿಂದ ಪಾಯಿಂಟ್ಸ್ ಕಲೆಹಾಕಿದರು. 10–2ರಲ್ಲಿ ಮುನ್ನಡೆ  ಸಾಧಿಸಿದ ಅವರು ಭಾರತದ ಆಟಗಾರ್ತಿಗೆ ಪಾಯಿಂಟ್ಸ್ ಗಳಿಸುವ ಅವಕಾಶ ನೀಡಲಿಲ್ಲ. ಈ ಹಂತದಲ್ಲಿ ಸೈನಾ ಒತ್ತಡಕ್ಕೆ ಒಳಗಾದರು. ಮೊದಲ ಗೇಮ್‌ನ ಅಂತಿಮ ಹಂತದವರೆಗೂ ಕೇವಲ ಒಂಬತ್ತು ಪಾಯಿಂಟ್ಸ್‌ಗಳನ್ನು ಗಳಿಸಿದರು.

ಎರಡನೇ ಗೇಮ್‌ನಲ್ಲಿಯೂ ತೈ ಜು ಯಿಂಗ್ ಉತ್ತಮ ಆರಂಭ ಪಡೆದರು. ಅವರ ವೇಗದ ಸರ್ವ್‌ ಮತ್ತು ರಿಟರ್ನ್ಸ್‌ಗಳನ್ನು ಎದುರಿಸುವ ವೇಳೆ ಸೈನಾ ತಬ್ಬಿಬ್ಬಾದರು. ಆ ಬಳಿಕ ಚೇತರಿಸಿಕೊಂಡ ಭಾರತದ ಆಟಗಾರ್ತಿ ಎದುರಾಳಿಯ ತಪ್ಪುಗಳಿಂದ ಕೆಲವು ಪಾಯಿಂಟ್ಸ್ ಕಲೆಹಾಕಿದರು. ಕ್ರಾಸ್‌ಕೋರ್ಟ್ ಹೊಡೆತಗಳ ಮೂಲಕ ಗಮನ ಸೆಳೆದರು. ಆದರೆ ಅಂತಿಮ ಹಂತದಲ್ಲಿ ತೈ ಜು ಯಿಂಗ್ ಅವರ ದಾಳಿಯನ್ನು ಎದುರಿಸಲು ಸೈನಾಗೆ ಸಾಧ್ಯವಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry